ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಹಿನ್ನೆಲೆ ಸರ್ಕಾರ ನೇಮಿಸಿರುವ ಸಕ್ಷಮ ಪ್ರಾಧಿಕಾರವು ಸಾಲಗಾರರಿಂದ ಸಾಲ ಮರುಪಾವತಿಸಿಕೊಳ್ಳಲು ಪ್ರತ್ಯೇಕ ಖಾತೆ ತೆರೆಯಬಹುದು ಎಂದು ಹೈಕೋರ್ಟ್ ಸೂಚಿಸಿದೆ.
ಬ್ಯಾಂಕ್ ಹಗರಣದ ಹಿನ್ನೆಲೆ ಕೆ.ಆರ್. ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಓದಿ : ಎಐಂಎ ಹಗರಣ: 2,695 ಕೋಟಿ ರೂ. ಠೇವಣಿ ಹಣ ವಾಪಸ್ ಕೋರಿ 65 ಸಾವಿರ ಅರ್ಜಿ ಸಲ್ಲಿಕೆ
ಬ್ಯಾಂಕ್ನಿಂದ ಸಾಲ ಪಡೆದವರು ಮರುಪಾವತಿ ಮಾಡಲು ಅವಕಾಶವಿದೆ. ಅದಕ್ಕಾಗಿ ಸಾಲಗಾರರು ಸಕ್ಷಮ ಪ್ರಾಧಿಕಾರ ಸಂಪರ್ಕಿಸಬಹುದು. ಪ್ರಾಧಿಕಾರವು ಪ್ರತ್ಯೇಕ ಖಾತೆ ತೆರೆದು ಸಾಲ ಮರುಪಾವತಿ ಮಾಡಿಸಿಕೊಳ್ಳಬಹುದು. ಬ್ಯಾಂಕಿಗೆ ಈಗಾಗಲೇ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇನ್ನು ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿಯ ಆಡಳಿತಾಧಿಕಾರಿ ಹುದ್ದೆಗೆ ಆರ್‌ಬಿಐ ಇಬ್ಬರು ಹಿರಿಯ ಬ್ಯಾಂಕ್ ಅಧಿಕಾರಿಗಳ ಹೆಸರು ಸೂಚಿಸಿದೆ. ಅವರಲ್ಲಿ ಸೂಕ್ತ ಎನ್ನಿಸಿದವರನ್ನು ಆಡಳಿತಾಧಿಕಾರಿಯಾಗಿ ಸಕ್ಷಮ ಪ್ರಾಧಿಕಾರ ನೇಮಕ ಮಾಡಬಹುದು ಎಂದು ಸೂಚಿಸಿದೆ.