ಕರ್ನಾಟಕ

karnataka

ETV Bharat / state

ಸಕಲ ಪೊಲೀಸ್ ಗೌರವದೊಂದಿಗೆ ಶ್ರೇಷ್ಠ ಸಾಹಿತಿ ಚಂಪಾ ಅಂತ್ಯಕ್ರಿಯೆ

ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಂತ್ಯಕ್ರಿಯೆ ಸಕಲ ಪೊಲೀಸ್​​ ಗೌರವದೊಂದಿಗೆ ನೆರವೇರಿತು.

ಸಕಲ ಪೊಲೀಸ್ ಗೌರವದೊಂದಿಗೆ ಸಾಹಿತಿ ಚಂಪಾ ಅಂತ್ಯಕ್ರಿಯೆ
ಸಕಲ ಪೊಲೀಸ್ ಗೌರವದೊಂದಿಗೆ ಸಾಹಿತಿ ಚಂಪಾ ಅಂತ್ಯಕ್ರಿಯೆ

By

Published : Jan 10, 2022, 7:20 PM IST

Updated : Jan 11, 2022, 12:09 AM IST

ಬೆಂಗಳೂರು:ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್​​ ಗೌರವದೊಂದಿಗೆ ನಡೆಸಲಾಯಿತು‌.

ಇದಕ್ಕೂ ಮೊದಲು, ಜ್ಯೋತಿ ಲೇಔಟ್​ನಲ್ಲಿರುವ ಮನೆಯಲ್ಲಿ ಚಂಪಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ವಿ. ಸೋಮಣ್ಣ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್, ನಟ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಚಂಪಾ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನದವರೆಗೆ ನಿವಾಸದಲ್ಲೇ ಇರಿಸಲಾಗಿತ್ತು. ಬಳಿಕ ಸಂಜೆ 2 ತಾಸು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ‌ ಪಡೆದರು. ನಂತರ ಚಾಮರಾಜಪೇಟೆಯ ಟಿ.ಆರ್.ಮಿಲ್‌ ಸಮೀಪದ ರುದ್ರಭೂಮಿಯಲ್ಲಿ ಬಂಡಾಯ ಹೋರಾಟಗಾರನ ಅಂತ್ಯಕ್ರಿಯೆ ನಡೆಯಿತು.

ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಂತ್ಯಕ್ರಿಯೆ

ಆರಂಭದಲ್ಲಿ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಅಂತ್ಯಕ್ರಿಯೆಗೆ ತೀರ್ಮಾನಿಸಲಾಗಿತ್ತು. ಬಳಿಕ ಕುಟುಂಬಸ್ಥರ ಜೊತೆ ಚರ್ಚಿಸಿ, ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: ಕನ್ನಡದ ಹಿರಿಯ ಸಾಹಿತಿ, ಕವಿ, ನಾಟಕಕಾರ ಪ್ರೊ. ಚಂದ್ರಶೇಖರ ಪಾಟೀಲ​ ನಿಧನ

ಸಿಎಂ ಬೊಮ್ಮಾಯಿ ಮಾತನಾಡಿ, 'ಚಂಪಾ ನನಗೆ ಬಹಳ ಹತ್ತಿರದವರು. ಸಾಹಿತ್ಯ ಲೋಕದಲ್ಲಿ ವಿಶಿಷ್ಠ ಸ್ಥಾನ ಪಡೆದವರು. ಅವರ ವಿಚಾರಗಳು ಬಹಳ ಸ್ಪಷ್ಟತೆಯಿಂದ ಕೂಡಿದ್ದು, ವ್ಯವಸ್ಥೆಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದರು. ಅವರು ಸಾಹಿತ್ಯ ಪ್ರಶಸ್ತಿಗೆ ಮಾತ್ರ ಸೀಮಿತರಾಗಿದ್ದವರಲ್ಲ. ಅವರ ಅವಶ್ಯಕತೆ ಕರ್ನಾಟಕಕ್ಕೆ ಇತ್ತು. ಸರ್ವ ಸ್ವತಂತ್ರವಾದ ಚಿಂತನೆ ಇರುವ ಸಾಹಿತ್ಯಗಳನ್ನು ಕನ್ನಡ ಸಾಹಿತ್ಯ ಲೋಕ ಬೆಳೆಸಬೇಕಿದೆ. ಚಂಪಾ ಬಿಟ್ಟುಹೋಗಿರುವ ಸಾಹಿತ್ಯ ಬಳುವಳಿಯನ್ನು ಯುವಜನರಿಗೆ ತಲುಪಿಸಬೇಕಿದೆ' ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, 'ಕನ್ನಡ ಸಾಹಿತ್ಯ ಪರಿಷತ್ತಿನ 22 ನೇ ಅಧ್ಯಕ್ಷರಾಗಿ ಚಂಪಾ ಸೇವೆ ಸಲ್ಲಿಸಿದ್ದರು. ಅವರನ್ನು ಕಳೆದುಕೊಂಡು ಬೇಸರದಲ್ಲಿದ್ದೇವೆ' ಎಂದರು.

Last Updated : Jan 11, 2022, 12:09 AM IST

For All Latest Updates

TAGGED:

ABOUT THE AUTHOR

...view details