ಬೆಂಗಳೂರು: ಶುಕ್ರವಾರ ಶಾಸಕ ಜಮೀರ್ ಅಹಮದ್ ನೇತೃತ್ವದಲ್ಲಿ ಚಾಮರಾಜಪೇಟೆಯ ವೆಂಕಟರಾಮ್ ಕಲಾಭವನದಲ್ಲಿ ಈದ್ಗಾ ಮೈದಾನದ ಭೂವಿವಾದದ ಕುರಿತು ಸಭೆ ಕರೆಯಲಾಗಿತ್ತು. ನಮ್ಮನ್ನು ಯಾರೂ ಈ ಸಭೆಗೆ ಕರೆದಿಲ್ಲ. ನಾವು ತೀರ್ಮಾನ ಮಾಡಿದಂತೆ ಜುಲೈ 12ರಂದು ಚಾಮರಾಜಪೇಟೆ ಬಂದ್ ಮಾಡೋದು ನಿಶ್ಚಿತ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಸಂಚಾಲಕ ರುಕ್ಮಾಂಗದ ತಿಳಿಸಿದರು. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾವ್ಯಾರೂ ಸಭೆಗೆ ಹೋಗಿಲ್ಲವೆಂದು ಶಾಸಕ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಜಮೀರ್ ಮಾತನ್ನು ಯಾರೂ ಕೇಳಬಾರದು. ಭರವಸೆ ನೀಡಿ ಸುಮ್ಮನಾಗುತ್ತಾರೆ. ಯಡಿಯೂರಪ್ಪ ಸಿಎಂ ಆದರೆ ಅವರ ಮನೆಯ ವಾಚ್ ಮೆನ್ ಆಗುತ್ತೇನೆ ಎಂದಿದ್ದರು. ಈ ಹಿಂದೆ ಕೂಡ ಧ್ವಜಾರೋಹಣ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದರು. ಆದರೆ ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ಹೇಳಿದರು.