ಬೆಂಗಳೂರು: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮನೆಮನೆಗೆ ಮುನಿರತ್ನ ಊಟ ಕಳಿಸಿ ಮಾನವೀಯತೆ ತೋರಿದ್ದರು. ಹಾಗಾಗಿ ಈ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರನ್ನು ಕೈಬಿಡಬೇಡಿ. ಮುನಿರತ್ನರನ್ನು ಗೆಲ್ಲಿಸಿ ಎಂದು ನಟ ದರ್ಶನ್ ಆರ್ ಆರ್ ನಗರ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ್ದಾರೆ.
ಜೆ ಪಿ ಪಾರ್ಕ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿರತ್ನ ಇವತ್ತು ನಿನ್ನೆಯಿಂದ ಪರಿಚಯವಾಗಿಲ್ಲ. ಹಲವಾರು ವರ್ಷಗಳಿಂದ ಅವರು ನಿರ್ಮಾಪಕ, ಶಾಸಕರನ್ನಾಗಿ ನಾನು ನೋಡಿದ್ದೇನೆ. ಕೊರೊನಾ ಇಡಿ ಜಗತ್ತಿಗೆ ಹರಡಿತ್ತು, ಎಲ್ಲರೂ ಮನೆ ಸೇರಿಕೊಂಡು ಬಿಟ್ಟರು ಜೇಬಿನಲ್ಲಿ ಹಣ ಇದ್ದರೂ ಅರ್ಧ ಲೀಟರ್ ಹಾಲು ಕುಡಿಯುವುದಕ್ಕೆ ಆಗಲಿಲ್ಲ. ಅಂಥಹ ಸಂದರ್ಭದಲ್ಲಿ ಮುನಿರತ್ನ ರಾಜೀನಾಮೆ ಕೊಟ್ಟಿದ್ದರು ಕ್ಷೇತ್ರದ ಜನರ ಪರ ಇದ್ದರು ಎಂದಿದ್ದಾರೆ.