ಕರ್ನಾಟಕ

karnataka

ETV Bharat / state

ಖರ್ಗೆಗೆ ಹೆಸರಿಗೆ ಮಾತ್ರ ಹುದ್ದೆ, ಇಬ್ರಾಹಿಂಗೆ ಜೋಕರ್ ಪಾತ್ರ: ಛಲವಾದಿ ನಾರಾಯಣಸ್ವಾಮಿ - etv bharat kannada

ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷವನ್ನು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

Congress and JDS
ರವಿದಾಸರ 573ನೇ ಜಯಂತಿ

By

Published : Feb 5, 2023, 2:26 PM IST

ಬೆಂಗಳೂರು: "ಕಾಂಗ್ರೆಸ್​ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ನಾಮಕಾವಸ್ತೆ ಹುದ್ದೆ ಕೊಟ್ಟಿದ್ದಾರೆ. ಜೆಡಿಎಸ್​ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರಿಗೆ ಜೋಕರ್​ ಪಾತ್ರವನ್ನು ಕೊಡಲಾಗಿದೆ" ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ಎಸ್​ಸಿ ಮೋರ್ಚಾ ವತಿಯಿಂದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸಂತ ರವಿದಾಸರ 573ನೇ ಜಯಂತಿ ಆಚರಿಸಲಾಯಿತು. ಈ ವೇಳೆ ಅವರು ಮಾತನಾಡಿದರು.

"ಜೆಡಿಎಸ್​ನಲ್ಲಿ ಯಾವ ಮುಖಂಡರಿದ್ದಾರೆ. ಇಬ್ರಾಹಿಂ ಅವರು ಅಧ್ಯಕ್ಷರಾಗಿದ್ದರೂ ಸಹ ಅವರ ಮಾತು ಪಕ್ಷದಲ್ಲಿ ನಡೆಯುತ್ತದೆಯೇ? ಈ ಹಿಂದೆ ಎಚ್.ಕೆ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರು. ನೈಜ ಅಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಅವರೇ ಕಾರ್ಯ ನಿರ್ವಹಿಸುತ್ತಿದ್ದರು. ಕಾಂಗ್ರೆಸ್- ಜೆಡಿಎಸ್‍ ಪಕ್ಷವು ಚುನಾವಣೆಗಾಗಿ ಯಾತ್ರೆ ಮಾಡುತ್ತದೆಯೇ ಹೊರತು ಸಂಘಟನೆಗಾಗಿ ಅಲ್ಲ. ನಮ್ಮ ಪಕ್ಷ ಚುನಾವಣೆ ಆದ ಮರುದಿನದಿಂದಲೇ ಸಂಘಟನಾ ಕಾರ್ಯ ನಡೆಸುತ್ತದೆ ಮತ್ತು ಚುನಾವಣೆ ನಂತರವೂ ಅದು ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತದೆ" ಎಂದು ತಿಳಿಸಿದರು.

"ಹಾಸನದಲ್ಲಿ ಜೆಡಿಎಸ್ ಮನೆಗೆ ಬೆಂಕಿ ಬಿದ್ದಿದೆ. ಮನೆಯಲ್ಲೇ 9 ಜನರು ಚುನಾವಣಾ ಕಣದಲ್ಲಿ ಇರುವ ಕಾರಣ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನವಗ್ರಹ ಯಾತ್ರೆ ಎಂದಿದ್ದಾರೆ. ಜೆಡಿಎಸ್‍ನವರದ್ದು ಕುಟುಂಬವೇ ರಾಜಕಾರಣ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಒಂದು ಕುಟುಂಬವೇ ಪಕ್ಷವನ್ನು ನಡೆಸುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬ ದಲಿತ ಮುಖಂಡನನ್ನು ಸರ್ವನಾಶ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಇವತ್ತು ಹೈಕಮಾಂಡ್ ಎಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರನ್ನೇ ಹೇಳುತ್ತಾರೆ. ಖರ್ಗೆಯವರಿಗೆ ನಾಮಕಾವಾಸ್ತೆ ಹುದ್ದೆ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷ ತೊರೆದು ಅನೇಕ ಜನರು ಬಿಜೆಪಿ ಸೇರುತ್ತಿದ್ದಾರೆ. ಮುಂದೆ ಇನ್ನಷ್ಟು ಮುಖಂಡರು ಬಿಜೆಪಿ ಸೇರುವವರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಸಹೋದರಿ ಗಗನ ಸುಕನ್ಯಾ ಆಮ್‌ ಆದ್ಮಿ ಪಾರ್ಟಿ ಸೇರ್ಪಡೆ

ಸಂತ ರವಿದಾಸರ ಜಯಂತಿ: "ಇಂದು ಎಸ್​ಸಿ ಮೋರ್ಚಾ ವತಿಯಿಂದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸಂತ ರವಿದಾಸರ 573ನೇ ಜಯಂತಿ ಆಚರಿಸಲಾಗಿದೆ. ಸಂತ ರವಿದಾಸರು ಮಹಾನ್ ಕವಿ, ಮಹಾನ್ ಚೇತನ ಮಾತ್ರವಲ್ಲದೇ ಸಂತರೂ ಆಗಿ ಮಾರ್ಗದರ್ಶನ ಮಾಡಿದವರು. ಇಡೀ ಉತ್ತರ ಭಾರತದಲ್ಲಿ ದಲಿತ ವರ್ಗ, ಹಿಂದುಳಿದ ವರ್ಗ ಮತ್ತು ಸಣ್ಣ ಸಮುದಾಯಗಳ ಮೇಲೆ ಅವರ ಛಾಯೆ ಇತ್ತು" ಎಂದು ವಿವರಿಸಿದರು.

"ಇಂದಿಗೂ ಅನೇಕ ಮಠಮಾನ್ಯಗಳು ಅವರನ್ನು ದೈವದಂತೆ ನೋಡುತ್ತಿದ್ದಾರೆ. ಲಕ್ಷಾಂತರ ಮಂದಿ ಅವರ ಗುಣಗಾನ ಮಾಡುವುದಲ್ಲದೇ, ಅವರ ಪರಿಶ್ರಮವನ್ನು ನೆನಪು ಮಾಡುತ್ತಾರೆ. ಬಿಜೆಪಿ ಎಸ್‍ಸಿ ಮೋರ್ಚಾವು ಇಂತಹ ಉತ್ತಮ ನಡೆ, ಸಮಾಜಕ್ಕೆ ಕೊಟ್ಟ ಕೊಡುಗೆಯ ಪರಿಚಯಕ್ಕಾಗಿ ಅವರ ಜಯಂತಿಯನ್ನು ಆಚರಿಸುತ್ತಿದೆ. ಕರ್ನಾಟಕದ 312 ಮಂಡಲಗಳಲ್ಲೂ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮತ್ತು ಮುಖಂಡರು, ಕಾರ್ಯಕರ್ತರು, ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಮದುವೆಯಾದ ಹೆಣ್ಣು ಮಕ್ಕಳನ್ನು ಯಾರು ನೋಡಿಕೊಳ್ತಾರೆ?: ಅಸ್ಸಾಂ ಕ್ರಮದ ಬಗ್ಗೆ ಓವೈಸಿ ಆಕ್ರೋಶ

ABOUT THE AUTHOR

...view details