ಕರ್ನಾಟಕ

karnataka

ETV Bharat / state

ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹೋಗುತ್ತೋ ಗೊತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ - ಪೂರ್ಣಿಮಾ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಮಾತು

ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ, ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹೋಗುತ್ತೋ ಗೊತ್ತಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ

By ETV Bharat Karnataka Team

Published : Oct 21, 2023, 4:52 PM IST

Updated : Oct 21, 2023, 9:09 PM IST

ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಬೆಂಗಳೂರು:ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹೋಗುತ್ತೋ ಗೊತ್ತಿಲ್ಲ. ಅದಕ್ಕೆ ಆಪರೇಷನ್ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಮೌನವಾಗಿದ್ದೇನೆ ಅಂದರೆ ಅದು ನನ್ನ ವೀಕ್ನೆಸ್ ಅಲ್ಲ ಅಂತಾರೆ. ಫೈಪೋಟಿಗಿಳಿದು ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಗೊತ್ತಾಗುತ್ತೆ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂದು. ಕಾಂಗ್ರೆಸ್ ಯಾಗ ಬೇಗುದಿಯಲ್ಲಿ ಬೆಯುತ್ತಿದೆ ಯಾವಾಗ ಬ್ಲಾಸ್ಟ್ ಆಗುತ್ತೋ ಗೊತ್ತಿಲ್ಲ. ಅದಕ್ಕೆ ಈ‌ ರೀತಿಯ ಅಪರೇಷನ್ ಮಾಡ್ತಾಯಿದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, ಪೂರ್ಣಿಮಾ ಅವರಿಗೆ ಅವರ ತಂದೆಯ ಹೇಳಿಕೆ ಬಗ್ಗೆ ಗೊತ್ತಿದ್ರೆ ಪಾಪ ಅವರು ಕಾಂಗ್ರೆಸ್​ಗೆ ಹೋಗ್ತಾಯಿರಲಿಲ್ಲ. ನನ್ನ ಪಾದರಕ್ಷೆ ಕೂಡ ಕಾಂಗ್ರೆಸ್ ಬಾಗಿಲಿಗೆ ಹೋಗಲ್ಲ ಎಂದು ಪೂರ್ಣಿಮಾ ಅವರ ತಂದೆ ಹೇಳಿದ್ದರು. ಇದೆಲ್ಲಾ ಯಾಕೆ ಪೂರ್ಣಿಮಾಗೆ ಗೊತ್ತಾಗಲಿಲ್ಲ. ಪೂರ್ಣಿಮಾ​ಗೆ ಅವರ ಪತಿ ಶ್ರೀನಿವಾಸ್ ಒತ್ತಡ ಹೆಚ್ಚಿತ್ತು ಅನ್ಯುತ್ತೆ..?. ತನ್ನ ಪತಿಯ ರಾಜಕೀಯ ಬೆಳವಣಿಗೆಗೆ ಈ ರೀತಿಯ ನಿರ್ಧಾರ ಮಾಡಿರಬಹುದು. ಶ್ರೀನಿವಾಸ್ ಮೇಲೆ ಡಿಕೆಶಿ ಒತ್ತಡ ಹಾಕಿರಬಹುದು ಎಂದು ಅಭಿಪ್ರಾಯ ಪಟ್ಟರು

ನಿನ್ನೆ ಸಿದ್ದರಾಮಯ್ಯ ಒಂದು ಮಾತು ನಿಜ ಹೇಳಿದ್ರು. ನೇರವಾಗಿ ಒಪ್ಪಿಕೊಂಡ್ರು, ಎ ಕೃಷ್ಣಪ್ಪರವರಿಗೆ ಟಿಕೆಟ್ ತಪ್ಪಿಸೋಕೆ ಕಾರಣ ತಾವೆ ಎಂದು ಹೇಳಿದ್ದಾರೆ. ಆದರೇ ಪೂರ್ಣಿಮಾ ಶ್ರೀನಿವಾಸ್ ಮೇಲೆ ಏನೋ ಒತ್ತಡವಿದೆ. ಆದ ಕಾರಣ ಕಾಂಗ್ರೆಸ್ ಸೇರಿದ್ದಾರೆ ಎಂದು ಮತ್ತೊಮ್ಮೆ ಹೇಳಿದರು. ನಿನ್ನೆ ದಿನ ಪೂರ್ಣಿಮಾ ಶ್ರೀನಿವಾಸ್ ಹಾಗೂ ಪತಿ ಟಿ.ಪಿ.ಶ್ರೀನಿವಾಸ್ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿ ಸಮೀಪದ ಭಾರತ್ ಜೋಡೋ ಭವನದಲ್ಲಿ ಕಾಂಗ್ರೆಸ್​ ಪಕ್ಷ ಸೇರ್ಪಡೆ ಗೊಂಡರು.

ಡಿಕೆ ಶಿವಕುಮಾರ್​ ಅವರಿಗೆ ಕೊಟ್ಟಿರೊ ಹುದ್ದೆಗಳನ್ನ ನಿಭಾಯಿಸೋಕೆ ಆಗ್ತಾಯಿಲ್ಲ. ಅಪರೇಷನ್ ಮಾಡಲು ಪ್ರತಿ ಜೆಡಿಎಸ್ ಬಿಜೆಪಿಯವರ ಮನೆಗೆ ಅವರೇ ಹೋಗುತ್ತಾರೆ. ಅವರನ್ನ ಡಿಸಿಎಂ‌ ಅನ್ನೋದಕ್ಕಿಂತ ಅಪರೇಷನ್ ಮಂತ್ರಿ ಅನ್ನೋದು ಸೂಕ್ತ. ಮತ್ತೊಂದೆಡೆ ಸರ್ಕಾರದಲ್ಲಿ ಕರಪ್ಷನ್ ಜೋರಾಗಿ ನಡೀತಾ ಇದೆ. ಬಿಜೆಪಿಯಿಂದ ಪೂರ್ಣಿಮಾರನ್ನು ತಡೆಯೋ ಕೆಲಸ ಮಾಡಲಿಲ್ಲ ಅನ್ನೋ ಪ್ರಶ್ನೆಗೆ, ಒತ್ತಡದ ತೀರ್ಮಾನಗಳಿಗೆ ಸಮಾಧಾನ ಮಾಡೋಕೆ ಆಗಲ್ಲ. ಮುಂದೆ ಜನ ತೀರ್ಮಾನ ಮಾಡ್ತಾರೆ ಎಂದರು.

ಇದನ್ನೂ ಓದಿ:'ನನ್ನ ಮೌನವೂ ವೀಕ್ನೆಸ್ ಅಲ್ಲ': ಪರೋಕ್ಷವಾಗಿ ಸತೀಶ್​ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್

Last Updated : Oct 21, 2023, 9:09 PM IST

ABOUT THE AUTHOR

...view details