ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯಿಂದ 5 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧಿತೆಯಾಗಿರುವ ಚೈತ್ರಾ ಕುಂದಾಪುರ ಇಂದು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿದ ಅಂಶಗಳು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮಹಿಳಾ ಸಾಂತ್ವನ ಕೇಂದ್ರದಿಂದ ಇಂದು ಸಿಸಿಬಿ ಕಚೇರಿಗೆ ಕರೆದುಕೊಂಡು ಬರುವಾಗ ಮಾಧ್ಯಮಗಳ ಕ್ಯಾಮರಾ ಕಂಡ ಚೈತ್ರಾ, ಸ್ವಾಮೀಜಿ ಬಂಧನ ಬಳಿಕ ದೊಡ್ಡವರ ಹೆಸರು ಕೂಡ ಬಹಿರಂಗವಾಗಲಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿದೆ. ಅದಕ್ಕಾಗಿಯೇ ಈ ತರ ಷಡ್ಯಂತ್ರ ರೂಪಿಸಿದ್ದಾರೆ ಎಂದು ಪರೋಕ್ಷವಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧ ಕಿಡಿಕಾರಿದ್ದಾರೆ. ಇದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.
ಚೈತ್ರಾ ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಆರೋಪಕ್ಕೂ ದೂರುದಾರ ಗೋವಿಂದ ಬಾಬುಗೂ ಏನು ಸಂಬಂಧ? ಆರೋಪದ ಹಿಂದೆ ಇರುವ ಸತ್ಯವೇನು ಎಂಬುದರ ಬಗ್ಗೆ ನೋಡುವುದಾದರೆ ಗೋವಿಂದಬಾಬು ಹೋಟೆಲ್ ಉದ್ಯಮಿಯಾಗಿದ್ದಾರೆ. ಬೈಂದೂರು ಮೂಲದ ಇವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಬಿಬಿಎಂಪಿ ಇಂದಿರಾ ಕ್ಯಾಂಟೀನ್ನ ಗುತ್ತಿಗೆದಾರರಾಗಿದ್ದಾರೆ. ಚೆಕ್ ಟಾಫ್ ಕಂಪೆನಿಯ ಮಾಲೀಕನಾಗಿದ್ದು ಹಲವು ವರ್ಷಗಳಿಂದ ಇಂದಿರಾ ಕ್ಯಾಂಟೀನ್ಗೆ ಆಹಾರ ಪೂರೈಸಲಾಗುತ್ತಿದೆ. ಹಾಗಾದರೆ ಗೋವಿಂದ ಬಾಬುಗೆ ಇಂದಿರಾ ಕ್ಯಾಂಟಿನ್ಗೆ ಸಂಬಂಧಿಸಿದಂತೆ ಬಿಲ್ ಪಾವತಿಯಾಗಿಲ್ವಾ? ಎಂಬುದರ ಬಗ್ಗೆ ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ಪ್ರಶ್ನೆಗೆ ಉತ್ತರಿಸಿದ್ದು. ಚೆಕ್ ಟಾಫ್ ಕಂಪನಿಯಿಂದ ಬಿಬಿಎಂಪಿಯಿಂದ ಬಿಲ್ ಪಾವತಿಸಲಾಗಿದೆ. ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಪ್ರತಿ ತಿಂಗಳು ಬಿಲ್ ಬರುತ್ತೆ. ಪಾವತಿ ಮಾಡೋದೆಲ್ಲವೂ ಸಹಜ ಪ್ರತಿಕ್ರಿಯೆಯಾಗಿದೆ ಎಂದಷ್ಟೇ ತಿಳಿಸಿದ್ದಾರೆ.