ಬೆಂಗಳೂರು : ಜೈಲಿಂದ ಬಂದ ಮೇಲೂ ಬುದ್ಧಿ ಕಲಿಯದೆ ಮತ್ತೆ ಸರಗಳ್ಳತನದಲ್ಲಿ ಸಕ್ರಿಯನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿದ್ಧಾಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೈಲಿಗೆ ಹೋಗಿ ಬಂದ ಮೇಲು ಬುದ್ಧಿ ಕಲಿಯದ ಖದೀಮ... ಮತ್ತೆ ಪೊಲೀಸರ ಅತಿಥಿಯಾದ ಸರಗಳ್ಳ - ಸಿದ್ಧಾಪುರ ಠಾಣಾ ಪೊಲೀಸ್ ಸುದ್ದಿ
ಜೈಲಿಂದ ಬಂದ ಮೇಲೂ ಬುದ್ಧಿ ಕಲಿಯದೆ ಮತ್ತೆ ಸರಗಳ್ಳತನದಲ್ಲಿ ಸಕ್ರಿಯನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿದ್ಧಾಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಫರ್ಹಾನ್ ಅಹ್ಮದ್ ಬಂಧಿತ ಆರೋಪಿ. ಕಳೆದ ಡಿಸೆಂಬರ್‌ನಲ್ಲಿ ಸಿದ್ಧಾಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ. ಸರ ಕಳೆದುಕೊಂಡ ಮಹಿಳೆಯರು ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ನೆಡೆಸಿದ್ದ ಪೊಲೀಸರು ಲಾಲ್‍ಬಾಗ್ ರೋಡ್, ದೊಡ್ಡ ಮಾವಳ್ಳಿ, ಕಲಾಸಿಪಾಳ್ಯ, ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದ ಫರ್ಹಾನ್ನನ್ನು ಬಂಧಿಸಿದ್ದಾರೆ.
ಬಂಧಿತ ಫರ್ಹಾನ್ ಸರಗಳ್ಳತನ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದ ನಂತರವೂ ಮತ್ತದೇ ಕಸುಬು ಮುಂದುವರಿಸಿದ್ದ. ಸದ್ಯ ಈತನ ಬಂಧನದಿಂದ ಸಿದ್ಧಾಪುರ ಠಾಣೆಯಲ್ಲಿ ದಾಖಲಾಗಿದ್ದ 3 ಪ್ರಕರಣ ಬೆಳಕಿಗೆ ಬಂದಿದ್ದು, 5 ಲಕ್ಷದ 50 ಸಾವಿರ ರೂ. ಮೌಲ್ಯದ ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಬೈಕನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.