ಕರ್ನಾಟಕ

karnataka

ETV Bharat / state

ಕದ್ದ ಬೈಕ್ ಬಳಸಿ ಸರಗಳ್ಳತನ ಮಾಡುತ್ತಿದ್ದ ಖದೀಮರು ಅಂದರ್ - bangalore chain snatching case

ಸರಗಳ್ಳತನ ಮಾಡುತ್ತಿದ್ದ ಆಸಿಫ್ ಪಾಷಾ ಮತ್ತು ಅರ್ಶದ್ ಖಾನ್ ಎಂಬ ಇಬ್ಬರು ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6.9 ಲಕ್ಷ ರೂ. ಬೆಲೆ ಬಾಳುವ 154 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

chain snatching case of bangalore: 2 arrested
ಕದ್ದ ಬೈಕ್ ಬಳಸಿ ಸರಗಳ್ಳತನ ಮಾಡುತ್ತಿದ್ದ ಖದೀಮರು ಅಂದರ್!

By

Published : Mar 13, 2021, 5:06 PM IST

ಬೆಂಗಳೂರು: ಕಳವು ಮಾಡಿದ್ದ ದ್ವಿಚಕ್ರ ವಾಹನ ಬಳಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಉತ್ತರ ವಿಭಾಗದ ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಆಸಿಫ್ ಪಾಷಾ ಮತ್ತು ಅರ್ಶದ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ 6.9 ಲಕ್ಷ ರೂ. ಬೆಲೆ ಬಾಳುವ 154 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಆರೋಪಿಗಳು ಹಗಲು ದರೋಡೆ ಮಾಡಿ ಜೈಲುಪಾಲಾಗಿ ಹೊರ ಬಂದಿದ್ದರು. ಆದ್ರೆ ಮತ್ತೆ ಅದೇ ಚಾಳಿ ಮುಂದುವರೆಸಿ ದರೋಡೆ ಮಾಡುತ್ತಿದ್ದರು.

ಇದನ್ನೂ ಓದಿ:ಕುಡಿದ ನಶೆಯಲ್ಲಿದ್ದ ಹೆತ್ತಮ್ಮನಿಂದ ಮಗುವಿನ ಮೇಲೆ ಭಯಂಕರ ಹಲ್ಲೆ.. ವಿಡಿಯೋ ವೈರಲ್​!

ಸದ್ಯ ಆರೋಪಿಗಳ ಬಂಧನದಿಂದ ಸಂಜಯನಗರ, ಹೆಬ್ಬಾಳ, ಬಯ್ಯಪ್ಪನಹಳ್ಳಿ, ವಿವೇಕ್ ನಗರ ಠಾಣೆಗಳ ಪ್ರಕರಣಗಳು ಬೆಳಕಿಗೆ ಬಂದಿವೆ. ದ್ವಿಚಕ್ರ ವಾಹನ ಕಳವು, ಸರಗಳ್ಳತನ ಸೇರಿದಂತೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details