ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಹೇಯ ಕೃತ್ಯ... ಯುವತಿಯ ವಿವಸ್ತ್ರಗೊಳಿಸಿ ಸರ ಕದ್ದ ಖದೀಮ! - ಯುವತಿಯನ್ನ ವಿವಸ್ತ್ರಗೊಳಿಸಿ ಸರ ಕಳ್ಳತನ

ಯುವತಿಯೊಬ್ಬಳು ಮನೆಯಲ್ಲಿ ಒಂಟಿಯಾಗಿದ್ದ ವೇಳೆ‌ ಮುಖಕ್ಕೆ ಮಾಸ್ಕ್ ಹಾಕಿ ನುಗ್ಗಿದ ದುಷ್ಕರ್ಮಿಯೊಬ್ಬ ಆಕೆಯನ್ನ ವಿವಸ್ತ್ರಗೊಳಿಸಿ ಸರ ಕದ್ದು ಎಸ್ಕೇಪ್ ಆಗಿದ್ದಾನೆ.

ಯುವತಿಯನ್ನ ವಿವಸ್ತ್ರಗೊಳಿಸಿ ಸರ ಕಳ್ಳತನ

By

Published : Nov 20, 2019, 2:12 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ಮನೆಯಲ್ಲಿ ಒಂಟಿಯಾಗಿದ್ದ ವೇಳೆ‌ ಮುಖಕ್ಕೆ ಮಾಸ್ಕ್ ಹಾಕಿ ನುಗ್ಗಿದ ದುಷ್ಕರ್ಮಿಯೊಬ್ಬ ಆಕೆಯನ್ನ ವಿವಸ್ತ್ರಗೊಳಿಸಿ ಸರ, ನಗದು ಕದ್ದಿರುವ ಘಟನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಶಿಕುಮಾರ್, ಡಿಸಿಪಿ ಉತ್ತರ ವಿಭಾಗ

ಯುವತಿಯ ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ ಯುವತಿ ಹಾಗೂ ಆಕೆಯ ತಾಯಿ ಇಬ್ಬರೇ ಮನೆಯಲ್ಲಿ ವಾಸವಾಗಿದ್ರು. ಸಂತ್ರಸ್ತೆ ಕಾಲೇಜಿಗೆ ಹೋದ್ರೆ, ತಾಯಿ ಕೆಲಸ ಮಾಡಿ ಜೀವನ ಸಾಗಿಸ್ತಿದ್ರು. ಆದ್ರೆ ದುಷ್ಕರ್ಮಿಯೊಬ್ಬ ಎರಡು ದಿನಗಳ ಹಿಂದೆ ತಾಯಿ ಕೆಲಸಕ್ಕೆ ಹೋಗಿರುವ ಸಮಯ ನೋಡಿ ಮನೆಯಲ್ಲಿ ಯುವತಿ ಒಬ್ಬಳೇ ಇದ್ದಾಗ ಮನೆಗೆ ನುಗ್ಗಿದ್ದಾನೆ. ಅಲ್ಲದೆ ಆಕೆಯನ್ನ ರೂಂಗೆ ಎಳೆದೊಯ್ದು ವಿವಸ್ತ್ರಗೊಳಿಸಿದ್ದಾನೆ ಎನ್ನಲಾಗಿದೆ. ಆಕೆಯ ಕುತ್ತಿಗೆಯಲ್ಲಿದ್ದ 20 ಗ್ರಾಂ ಚಿನ್ನದ ಸರ, ಬೆಳ್ಳಿಯ ಉಂಗುರ ಕಸಿದುಕೊಂಡಿದ್ದಾನೆ. ಈ ವಿಚಾರ ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

ಸದ್ಯ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಂಡ ರಚನೆ ಮಾಡಿ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ಈ ಕೃತ್ಯವನ್ನು ಪರಿಚಯಸ್ಥರೇ ಎಸಗಿರುವ ವಿಚಾರ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.

ABOUT THE AUTHOR

...view details