ಬೆಂಗಳೂರು :ಸರಗಳ್ಳತನದಿಂದ ಅದೆಷ್ಟೋ ಮಹಿಳೆಯರು ಅವಶ್ಯಕತೆ ಇದ್ದರೂ ಮನೆಯಿಂದಾಚೆ ಬರಲು ಹೆದರುತ್ತಿದ್ದರು. ಅದರಲ್ಲೂ ಲಾಕ್‌ಡೌನ್ ಇದ್ದಿದ್ದರಿಂದ ಜನರ ಓಡಾಟವೇ ಇಲ್ಲದಂತಾಗಿದೆ. ಸರಗಳ್ಳತನದ ಪ್ರಕರಣಗಳು ಕೂಡ ಕಡಿಮೆಯಾಗಿತ್ತು. ಆದ್ರೀಗ ನಗರದಲ್ಲಿ ಮತ್ತೆ ಸರಗಳ್ಳರು ಆ್ಯಕ್ಟೀವ್ ಆಗಿದ್ದು, ಅವರ ಹಾವಳಿ ಹೆಚ್ಚಾಗಿದೆ.
ಈ ಬಾರಿ ಬೆಳ್ಳಂಬೆಳಗ್ಗೆ ವಾಕಿಂಗ್ ಮತ್ತು ಅಂಗಡಿಗೆ ಬರೋ ವೃದ್ಧೆಯರನ್ನ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಒಂಟಿಯಾಗಿ ಓಡಾಡೋ ವೃದ್ಧೆಯರನ್ನ ಟಾರ್ಗೆಟ್ ಮಾಡಿ ಚೈನ್ ಸ್ನಾಚ್ ಮಾಡ್ತಾರೆ. ಇದೇ ರೀತಿ ಇಂದು ಬೆಳ್ಳಂಬೆಳಗ್ಗೆ ಕಾಮಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳರು ಚೈನ್ ಸ್ನಾಚ್ ಮಾಡಿದ್ದಾರೆ.