ಕರ್ನಾಟಕ

karnataka

ETV Bharat / state

ಸರಗಳ್ಳತನ ಯಶಸ್ವಿಯಾಗಲೆಂದು ಮಲೆಮಹದೇಶ್ವರನಿಗೆ ಹರಕೆ! ಮುಡಿಕೊಟ್ಟು ಬರ್ತಿದ್ದಂತೆ ಪೊಲೀಸರ ದರ್ಶನ - ಗಿರಿನಗರ ಪೊಲೀಸರಿಂದ ಇಬ್ಬರು ಕಳ್ಳರ ಬಂಧನ

Chain snatchers arrested: ರಾಜಧಾನಿಯಲ್ಲಿ ಸರಗಳ್ಳರಿಬ್ಬರು ವೃದ್ಧೆಯ ಸರ ಎಗರಿಸಿ ದೇವರಿಗೆ ಹರಕೆಯಂತೆ ಮುಡಿಕೊಟ್ಟು ಬಂದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಕಳ್ಳರ ಬಂಧನ
ಕಳ್ಳರ ಬಂಧನ

By

Published : Aug 20, 2023, 1:35 PM IST

Updated : Aug 20, 2023, 1:52 PM IST

ಬೆಂಗಳೂರು: ಹರಕೆ ಹೊತ್ತು ಸರಗಳ್ಳತನ ಮಾಡಿ ಮಲೆ ಮಹದೇಶ್ವರನ ಮೊರೆ ಹೋಗಿದ್ದ ಕಳ್ಳನಸಹಿತ ಇಬ್ಬರು ಖದೀಮರನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಹಾಗೂ ಯತೀಶ್ ಬಂಧಿತರು. ಆಗಸ್ಟ್ 13ರಂದು ಬೆಳಿಗ್ಗೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಶ್ಯಾಮಲಾ ಎಂಬ ವೃದ್ದೆಯ ಸರ ಎಗರಿಸಿ ಪರಾರಿಯಾಗಿದ್ದರು.

ಸರಗಳ್ಳತನ ಯಶಸ್ಸಿಗೆ ಹರಕೆ:ಐಷಾರಾಮಿ ಜೀವನ ಸಾಗಿಸಲು ಆರೋಪಿಗಳು ಸರಗಳ್ಳತನ ಮಾಡುತ್ತಿದ್ದರು. ಸರಗಳ್ಳತನದಲ್ಲಿ ಯಶಸ್ಸು ಸಿಕ್ಕರೆ ಮಲೆಮಹದೇಶ್ವರನ ಸನ್ನಿಧಿಗೆ ಬಂದು ಮುಡಿ ಕೊಡುವುದಾಗಿ ಆರೋಪಿ ಮಂಜುನಾಥ್ ಹರಕೆ ಹೊತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಗಳ್ಳತನ ಮಾಡಿ ನೇರವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಮಂಜುನಾಥ್, ದರ್ಶನ ಮುಗಿಸಿ ಮುಡಿಕೊಟ್ಟು ವಾಪಸಾಗುತ್ತಿದ್ದಂತೆ ಗಿರಿನಗರ ಠಾಣಾ ಪೊಲೀಸರ ದರ್ಶನವಾಗಿದೆ. ಆರೋಪಿಗಳು ದ್ವಿಚಕ್ರ ವಾಹನಗಳನ್ನು ಕದ್ದು, ಅದರಲ್ಲಿ ಸಂಚರಿಸಿ ಸರಗಳ್ಳತನ ಮಾಡುತ್ತಿದ್ದರು. ಬಂಧಿತರಿಂದ 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗಿರಿನಗರ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Chian snaching: ವೃದ್ಧೆಯನ್ನು ಹಿಂಬಾಲಿಸಿ ಸರಗಳ್ಳತನ; ಬೆಂಗಳೂರಿನಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯ

ಆಗಸ್ಟ್​ 9ರಂದು ಇಂಥದ್ದೇ ಘಟನೆ: ಬೆಂಗಳೂರಿನ ಎನ್ಆರ್​ಐ ಬಡಾವಣೆಯ 5ನೇ ಕ್ರಾಸ್​ನ ಮಾರುತಿ ಪ್ರತೀಕ್ ಅಪಾರ್ಟ್​ಮೆಂಟ್ ಮುಂಭಾಗದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಹಿಂಬಾಲಿಸಿ ಸರ ಕಸಿದು ಪರಾರಿಯಾದ ಘಟನೆ ನಡೆದಿತ್ತು. ಆಗಸ್ಟ್ 9ರ ರಾತ್ರಿ 8.30ರ ವೇಳೆ ಮೊಮ್ಮಗಳ ಜೊತೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಫಾಲೋ ಮಾಡಿದ ಸರಗಳ್ಳ, ಹಿಂಬದಿಯಿಂದ ಕೈಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದಿದ್ದಾನೆ.

ಸರ ಎಳೆದ ರಭಸಕ್ಕೆ ವೃದ್ದೆ ಕೆಳಗೆ ಬಿದ್ದಿದ್ದಾರೆ. ಖದೀಮ ಸ್ಥಳದಿಂದ ಪರಾರಿಯಾಗಿದ್ದಾನೆ. ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ವಿಡಿಯೋ ವೈರಲಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಸರಗಳ್ಳತನ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪೊಲೀಸರು ಎಲ್ಲಾ ರೀತಿಯ ಕಡಿವಾಣ, ಕ್ರಮ ತೆಗದುಕೊಂಡರೂ ಕಳ್ಳರು ಮಾತ್ರ ಪ್ರತಿ ಬಾರಿ ತಮ್ಮ ಹೊಸ ಕೈಚಳಕ ಉಪಯೋಗಿಸುತ್ತಿದ್ದಾರೆ.

ಇದನ್ನೂ ಓದಿ:Chian snaching: ವೃದ್ಧೆಯನ್ನು ಹಿಂಬಾಲಿಸಿ ಸರಗಳ್ಳತನ; ಬೆಂಗಳೂರಿನಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯ

Last Updated : Aug 20, 2023, 1:52 PM IST

ABOUT THE AUTHOR

...view details