ಕರ್ನಾಟಕ

karnataka

ETV Bharat / state

ಯೂಟ್ಯೂಬ್​ ನೋಡಿ ಸರಗಳ್ಳತನಕ್ಕೆ ಇಳಿದಿದ್ದ ಖದೀಮರ ಸೆರೆ, ಸಾಲ ತೀರಿಸಲು ಕ್ರೈಂ ಲೋಕಕ್ಕೆ ಎಂಟ್ರಿ

ಸಾಲ ತೀರಿಸಲು ಯೂ ಟ್ಯೂಬ್​ ಮೂಲಕ ಕಳ್ಳತನ ಮಾಡೋದು ಹೇಗೆ ಎನ್ನುವ ಫ್ರೀ ಟೀಚಿಂಗ್​ ವೀಡಿಯೋ ನೋಡುವ ಮೂಲಕ ಕಳ್ಳತನಕ್ಕೆ ಇಳಿದಿದ್ದ ಖದೀಮರು ಪೊಲೀಸರ ಅತಿಥಿಯಾಗಿದ್ದಾರೆ.

ಖದೀಮರು

By

Published : Oct 12, 2019, 11:56 AM IST

ಬೆಂಗಳೂರು:ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದಿದ್ದ ಕ್ಯಾಬ್​ ಚಾಲಕರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕುತೂಹಲಕಾರಿ ಎಂದರೆ ಈ ಖದೀಮರು ಯೂ ಟ್ಯೂಬ್​ ಮೂಲಕ ಕಳ್ಳತನ ಮಾಡುವುದನ್ನು ಕಲಿತಿದ್ರಂತೆ.

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾದ ವೀರೇಶ್, ತಿಪ್ಪೇಸ್ವಾಮಿ ಬಂಧಿತ ಆರೋಪಿಗಳು. ಇವರು ತುಂಬಾ ಸಾಲಗಳನ್ನ ಮಾಡಿಕೊಂಡು ಹೇಗಾದರು‌ ಮಾಡಿ ಅದನ್ನ ತೀರಿಸಿಕೊಳ್ಳಬೇಕೆಂಬ ಕಾರಣಕ್ಕೆ ಸರಗಳ್ಳತನ ಮಾಡಲು ಮುಂದಾಗಿದ್ದರು.

ಈ ವೇಳೆ ಯಾವ ರೀತಿ ಸರಗಳ್ಳತನ ಮಾಡೋದು ಅನ್ನೋದು ತಿಳಿಯದೆ ಚೈನ್ ಸ್ನ್ಯಾಚಿಂಗ್ ಸಿಸಿಟಿವಿ ವೀಡಿಯೋಗಳನ್ನ ಯೂ ಟ್ಯೂಬ್​ನಲ್ಲಿ ನೋಡಿ ಅದೇ ರೀತಿ ಸರಗಳ್ಳತನ ಮಾಡೋಕೆ ಪ್ಲಾನ್ ಹಾಕಿದ್ರು. ಹೀಗಾಗಿ ಮೊದಲು ಅನುಮಾನ ಬಾರದಿರಲಿ ಅಂತಾ ಕಳ್ಳತನ ಮಾಡಲು ಹೊಸೂರಿನ ಬಳಿ ಬೈಕ್ ಕದ್ದು ಮನೆ ಬಳಿ ಕಳ್ಳತನ ಮಾಡೋದನ್ನ ಅಭ್ಯಾಸ ಮಾಡಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಕದ್ದ ಬೈಕ್ನಲ್ಲಿ ವೃದ್ಧೆಯೊಬ್ಬರ ಸರ ಕದ್ದು ಎಸ್ಕೇಪ್ ಆಗುವಾಗ ಟವರ್ ಲೊಕೇಷನ್ ಆಧರಿಸಿ ಸುಬ್ರಹ್ಮಣ್ಯಪುರ ಪೊಲೀಸ್ ಇನ್ಸ್​ಪೆಕ್ಟರ್​ ಪರಮೇಶ್ ನೇತೃತ್ವದ ತಂಡ ಮೊದಲ ಪ್ರಯತ್ನದಲ್ಲೇ ಕ್ಯಾಬ್ ಚಾಲಕರನ್ನು ಬಂಧಿಸಿದ್ದಾರೆ.

ಸದ್ಯ ಬಂಧಿತರಿಂದ ಪೊಲೀಸರು ಒಟ್ಟು 1 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಮತ್ತು ಕದ್ದ ಬೈಕ್ ​ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details