ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮತ್ತೆ ಸರಗಳ್ಳರ ಹಾವಳಿ: ವೃದ್ಧೆಯ ಸರ ಎಗರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬೆಂಗಳೂರು ಅಪರಾಧ ಸಂಬಂಧಿತ ಸುದ್ದಿ

ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕೊರಳಿನಿಂದ ಸರಗಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸರಗಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆ
ಸರಗಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆ

By

Published : Oct 27, 2020, 7:46 AM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸರು ನಾಕಾಬಂದಿ ಹಾಕಿದರೂ ಕಳ್ಳರು ಪೊಲೀಸರ ಕಣ್ತಪ್ಪಿಸಿ ಸರಗಳ್ಳತನ ಮಾಡುತಿದ್ದಾರೆ.

ಹಿಂಬದಿಯಿಂದ ಬೈಕಿನಲ್ಲಿ ಬಂದ ಕಳ್ಳರು ಪೂಜಾ ಸಾಮಾಗ್ರಿ ತರಲು ತೆರಳುತ್ತಿದ್ದ ವೃದ್ಧೆಯ ಕೊರಳಿನಿಂದ ಸರ ಎಗರಿಸಿ ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸರಗಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆ

ಕಳೆದ ಭಾನುವಾರ ಆಯುಧ ಪೂಜೆ ಹಿನ್ನೆಲೆ ಸರೋಜಮ್ಮ ಎಂಬುವರು ಪೂಜಾ ಸಾಮಗ್ರಿ ತರಲು ಕೆಂಗೇರಿ ಬಳಿಯ ವಲಗೇರಹಳ್ಳಿ ಬಳಿ ತೆರಳುತ್ತಿದ್ದರು. ಈ ವೇಳೆ ಕಿರಾತಕರು ಕೃತ್ಯ ಎಸಗಿದ್ದಾರೆ. ಸರ ಕದಿಯುವ ಸಂದರ್ಭದಲ್ಲಿ ವೃದ್ಧೆ ರಸ್ತೆ ಮೇಲೆ ಬಿದ್ದಿದ್ದು, ಪರಿಣಾಮ ಮೊಣ ಕೈ ಹಾಗೂ ಕಾಲುಗಳಿಗೆ ಗಾಯವಾಗಿದೆ. ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡಿದರೂ ಸಹ ಆರೋಪಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದು, ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details