ಕರ್ನಾಟಕ

karnataka

ETV Bharat / state

ಸಿನಿಮೀಯ ಶೈಲಿಯಲ್ಲಿ ಸರಗಳ್ಳನನ್ನು ಹಿಡಿದ ಆಟೋ ಚಾಲಕ.. ಹಿಡಿದಿದ್ದು ಹೇಗೆ ಗೊತ್ತಾ?

ಸಿನಿಮೀಯ ಶೈಲಿಯಲ್ಲಿ ಸರಗಳ್ಳನನ್ನು ಆಟೋ ಚಾಲಕ ಸೆರೆ ಹಿಡಿದಿರುವ ಘಟನೆ ನಗರದ ಮಾರತ್​ ಹಳ್ಳಿಯ ಮ್ಯಾಕ್ಸ್ ಶೋ ರೂಂ ಮುಂದೆ ನಡೆದಿದೆ. ಆಟೋ ಚಾಲಕ ಕಳ್ಳನನ್ನು ಚೇಸ್​ ಮಾಡಿ ಹಿಡಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Chain Snacher arrested in Bengaluru
ಸರಗಳ್ಳನನ್ನು ಹಿಡಿದ ಆಟೋ ಚಾಲಕ

By

Published : Dec 11, 2019, 1:56 PM IST

Updated : Dec 11, 2019, 2:16 PM IST

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಸರಗಳ್ಳನನ್ನು ಆಟೋ ಚಾಲಕ ಸೆರೆ ಹಿಡಿದಿರುವ ಘಟನೆ ನಗರದ ಮಾರತ್​ ಹಳ್ಳಿಯ ಮ್ಯಾಕ್ಸ್ ಶೋ ರೂಂ ಮುಂದೆ ನಡೆದಿದೆ.

ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಆ್ಯಕ್ಟಿವಾದಲ್ಲಿ ಬಂದ ಕಳ್ಳನೊಬ್ಬ ಅಡ್ಡಗಟ್ಟಿ, ಕ್ಷಣಾರ್ಧದಲ್ಲಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಆಟೋ ಚಾಲಕ ಹನುಮಂತ, ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳನ ಬೈಕ್​ಗೆ ಡಿಕ್ಕಿ ಹೊಡೆದು ಆತನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾನೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾನೆ.

ಸಿನಿಮೀಯ ಶೈಲಿಯಲ್ಲಿ ಸರಗಳ್ಳನನ್ನು ಹಿಡಿದ ಆಟೋ ಚಾಲಕ

ಆಟೋಚಾಲಕ ಹನುಮಂತನ ಸಾಹಸ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈಲ್ಟ್ ಫೀಲ್ಡ್ ಡಿಸಿಪಿ ಅನುಚೇತ್ ಆಟೋಚಾಲಕನಿಗೆ ಹತ್ತು ಸಾವಿರ ಬಹುಮಾನ ನೀಡಿ ಅಭಿನಂದಿಸಿದ್ದಾರೆ. ಈ ಬಗ್ಗೆ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳತನ ಮಾಡಿದ ಆರೋಪಿಯನ್ನು ಕೆಜಿ ಹಳ್ಳಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ. ಆರೋಪಿ ವಿಘ್ನೇಶ್​ನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಈ ಹಿಂದೆ ಈತ ಬಹಳಷ್ಟು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ಬಾಯಿ ಬಿಟ್ಟಿದ್ದಾನೆ.

Last Updated : Dec 11, 2019, 2:16 PM IST

For All Latest Updates

ABOUT THE AUTHOR

...view details