ಕರ್ನಾಟಕ

karnataka

ETV Bharat / state

ಗೃಹ ಪ್ರವೇಶಕ್ಕೆ ಆಹ್ವಾನಿಸುವ ನೆಪದಲ್ಲಿ ಬಂದು ಮಹಿಳೆಯ ಸರ ಕದ್ದೊಯ್ದರು! - Fake Gold Coin

ಗೃಹ ಪ್ರವೇಶಕ್ಕೆ ಆಹ್ವಾನ ನೀಡುವ ಸೋಗಿನಲ್ಲಿ ಬಂದ ಕಿರಾತಕರು ಮಹಿಳೆಯ ಸರ ಎಗರಿಸಿ ಪರಾರಿಯಾಗಿರುವ ಘಟನೆ ಸುಬ್ರಮಣ್ಯಪುರದಲ್ಲಿ ನಡೆದಿದೆ.

chain-scathing-continues-women-chain-robbed-in-subramanyapura
ಗೃಹ ಪ್ರವೇಶಕ್ಕೆ ಆಹ್ವಾನಿಸುವ ನೆಪದಲ್ಲಿ ಚಿನ್ನ ಸರ ಎಗರಿಸಿದ ಕಳ್ಳರು

By

Published : Oct 10, 2020, 10:29 AM IST

ಬೆಂಗಳೂರು: ಗೃಹಪ್ರವೇಶಕ್ಕೆ ಆಮಂತ್ರಣ ಕೊಡುವ ನೆಪದಲ್ಲಿ ಮನೆಗೆ ಬಂದು ಚಿನ್ನದ ಸರ ಕದ್ದೊಯ್ದಿರುವ ಘಟನೆ ನಡೆದಿದೆ. ಸುಬ್ರಮಣ್ಯಪುರದ ಸರೋಜಾ ಎಂಬುವವರ ಮನೆಯಲ್ಲಿ ಸರಗಳ್ಳತನ ನಡೆದಿದೆ.

ಗೃಹ ಪ್ರವೇಶದ ಆಹ್ವಾನ ಕೊಡುವ ನೆಪದಲ್ಲಿ ಮನೆಯೊಳಗೆ ಬಂದ ಇಬ್ಬರು, ನಿಮ್ಮ ಎದುರಿನ ಮನೆ ತೆಗೆದುಕೊಂಡಿದ್ದೇವೆ. ಗೃಹ ಪ್ರವೇಶಕ್ಕೆ ಬರಬೇಕು ಎಂದು ಇನ್ವಿಟೇಶನ್ ಜೊತೆಗೆ ನಕಲಿ ಬೆಳ್ಳಿ ಕಾಯಿನ್ ಕೊಟ್ಟಿದ್ದಾರೆ. ನಂತರ ಮಹಿಳೆಯ ಸರವನ್ನು ಕಂಡು ನೀವು ಗೃಹಪ್ರವೇಶಕ್ಕೆ ಬನ್ನಿ, ಚಿನ್ನದ ಪದಕ (ಲಾಕೆಟ್​​) ಕೊಡ್ತೀನಿ ಅಂದಿದ್ದಾರೆ. ಹಾಗೆಯೇ ಮಹಿಳೆಯ ಚಿನ್ನದ ಸರವನ್ನು ನೋಡಿ "ಚೆನ್ನಾಗಿದೆ, ನೋಡಿ ಕೊಡ್ತೀವಿ" ಎಂದು ಪಡೆದಿದ್ದಾರೆ.

ಇದೇ ವೇಳೆ ಮನೆಗೆ ಗ್ಯಾಸ್ ಸಿಲಿಂಡರ್​ ಬಂದಿದ್ದು, ಡೆಲಿವರಿ ಪಡೆಯಲು ಮನೆಯೊಳಗೆ ತೆರಳಿದ್ದಾಗ ಚಿನ್ನದ ಸರದ ಜೊತೆ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ಮೋಸಹೋದ ಮಹಿಳೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸರಗಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details