ಬೆಂಗಳೂರು:ಇತ್ತೀಚೆಗಷ್ಟೇ ಸುಮ್ಮನಹಳ್ಳಿ ಬಿಎಂಟಿಸಿ ಬಸ್ ದುರಂತ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಗರದಲ್ಲಿ ನಡೆದಿದೆ. ಜಯನಗರದ 9ನೇ ಬ್ಲಾಕ್ ಪಂಪ್ ಹೌಸ್ ವೃತ್ತದಲ್ಲಿ ವೋಲ್ವೊ ಬಸ್ ಬ್ರೇಕ್ ಫೇಲ್ ಆಗಿ ಇಂದು ಸರಣಿ ಅಪಘಾತ ಸಂಭವಿಸಿದೆ.
ಬಿಎಂಟಿಸಿ ವೋಲ್ವೊ ಬಸ್ ಬ್ರೇಕ್ ಫೇಲ್: ಸರಣಿ ಅಪಘಾತದಿಂದ 8 ಕಾರು, 2 ಆಟೋ, 4 ಬೈಕ್ ಜಖಂ - chain accident in bangalore
ಬೆಂಗಳೂರಿನ ಜಯನಗರದಲ್ಲಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದೆ. ಕಾರು, ಬೈಕ್ ಹಾಗೂ ಆಟೋ ಈ ಅಪಘಾತದಲ್ಲಿ ಜಖಂಗೊಂಡಿವೆ. ಬಿಎಂಟಿಸಿ ನಿರ್ಲಕ್ಷ್ಯದ ವಿರುದ್ಧ ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ವೋಲ್ವೊ ಬಸ್ ಬ್ರೇಕ್ ಫೇಲ್ನಿಂದ ಸರಣಿ ಅಪಘಾತ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಟಿಎಂ ಲೇಔಟ್ಗೆ ಹೊರಟಿದ್ದ ವೋಲ್ವೊ ಬಸ್ನ ಬ್ರೇಕ್ ಫೇಲ್ ಆಗಿದ್ದು, ಸರಣಿ ಅಪಘಾತಕ್ಕೆ ಕಾರಣವಾಗಿದೆ. ಈ ವೇಳೆ 8 ಕಾರು, 2 ಆಟೊ, ಮತ್ತು 4 ದ್ವಿಚಕ್ರ ವಾಹನಗಳು ಅಪಘಾತದಲ್ಲಿ ಜಖಂಗೊಂಡಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನಗಳ ಮಾಲೀಕರು ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.