ಬೆಂಗಳೂರು: ಪ್ರಸಕ್ತ 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ವೇಳಾಪಟ್ಟಿ ಪ್ರಕಟಗೊಳಿಸಲಾಗಿದೆ. ಜುಲೈ 7 ಮತ್ತು 8ರಂದು ಪರೀಕ್ಷೆಗಳು ನಡೆಯಲಿವೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.
2021ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಸಿಇಟಿ ಪರೀಕ್ಷೆ ವೇಳಾಪಟ್ಟಿ ಪ್ರಕಟ! - 2021ನೇ ಸಾಲಿನ ಸಿಇಟಿ ಪರೀಕ್ಷೆ ವೇಳಾಪಟ್ಟಿ
18:13 February 20
ಸಿಇಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ವೇಳಾಪಟ್ಟಿ ಹೀಗಿದೆ:
- 7-7-2021- ಬೆಳಗ್ಗೆ 10:30ರಿಂದ 11:50- ಜೀವ ವಿಜ್ಞಾನ
- 7-7-2021 ಮಧ್ಯಾಹ್ನ 2:30ರಿಂದ 3:50- ಗಣಿತ
- 8-7-2021 ಬೆಳಗ್ಗೆ 10:30ರಿಂದ 11:50- ಭೌತ ವಿಜ್ಞಾನ
- 8-7-2021 ಮಧ್ಯಾಹ್ನ 2.30 ರಿಂದ 3.50- ರಸಾಯನ ವಿಜ್ಞಾನ
- 9-7-2021 ಬೆಳಗ್ಗೆ 11: 30 ರಿಂದ 12:30 ಕನ್ನಡ (ಬೆಂಗಳೂರಿನಲ್ಲಿ ಮಾತ್ರ)
ಕನ್ನಡ ಪರೀಕ್ಷೆಯನ್ನು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಬರೆಯಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮ, ಫಾರ್ಮ-ಡಿ ಸೇರಿ ಇನ್ನಿತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ.
ರಾಜ್ಯದಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‌ಸಿ 12ನೇ ತರಗತಿ ಪರೀಕ್ಷೆ ಹಾಗೂ ಇತರ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಸಿಇಟಿ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ರಾಜ್ಯದ ದ್ವಿತೀಯ ಪಿಯಸಿ ಪರೀಕ್ಷೆ ಮೇ 24ರಿಂದ ಜೂನ್ 10ರವರೆಗೆ, ಸಿಬಿಎಸ್‌ಸಿ 12ರ ತರಗತಿ ಪರೀಕ್ಷೆ ಮೇ 4ರಿಂದ ಜೂನ್ 2ರವರೆಗೆ, ಪಶ್ಚಿಮ ಬಂಗಾಳದ ಸಿಇಟಿ ಜುಲೈ 11ರಂದು, ಜೆಇಇ (ಮೇನ್) ಫೆಬ್ರವರಿ 23ರಿಂದ ಮೇ 28ರವರೆಗೆ, ನೀಟ್ ಪರೀಕ್ಷೆ ಜುಲೈನಲ್ಲಿ, ಜೆಇಇ (ಅಡ್ವಾನ್ಸ್) ಜುಲೈ 3, ಗೋವಾ ಸಿಇಟಿ ಮೇ ನಾಲ್ಕನೇ ವಾರದಲ್ಲಿ, ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂನ್ 14ರಿಂದ ಜೂನ್ 25ರವರೆಗೆ ನಡೆಯಲಿದೆ. ಈ ಎಲ್ಲ ವೇಳಾಪಟ್ಟಿಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದ ಸಿಇಟಿ ಪರೀಕ್ಷೆ ವೇಳಾಪಟ್ಟಿ ತಯಾರಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.