ಬೆಂಗಳೂರು :ಸಿಇಟಿ, ನೀಟ್, ಜೆಇಇ ಮುಂತಾದ ಉನ್ನತ ಹಂತದ ಪರೀಕ್ಷೆಗಳಿಗೆ ಅರ್ಜಿ ತುಂಬುವಾಗ ಅಭ್ಯರ್ಥಿಗಳು ತಪ್ಪು ಮಾಡುತ್ತಿರುವ ಹಿನ್ನೆಲೆ ಇದಕ್ಕೆ ಸಂಬಂಧಿಸಿದಂತೆ ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಆಯಾ ಕಾಲೇಜುಗಳಲ್ಲಿಯೇ ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಅಶ್ವತ್ಥ್ ನಾರಾಯಣ ಅವರು, ಅಭ್ಯರ್ಥಿಗಳು ಹೆಚ್ಚಾಗಿ ಈ ಅರ್ಜಿಗಳಲ್ಲಿ ವಾರ್ಷಿಕ ಆದಾಯ, ಕೆಟಗರಿ, ಹೆಸರು, ಹುಟ್ಟಿದ ದಿನಾಂಕ, ಕೋರ್ಸ್ ಆಯ್ಕೆ ಮುಂತಾದ ಮಾಹಿತಿಗಳನ್ನು ಭರ್ತಿ ಮಾಡುವಾಗ ತಪ್ಪು ಮಾಡುತ್ತಿರುವುದು ಕಂಡು ಬಂದಿದೆ.
ಇದರಿಂದಾಗಿ ಹೆಚ್ಚಿನ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಉನ್ನತ ಶಿಕ್ಷಣದ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಗಮನಿಸಿ ಗೆಟ್ ಸೆಟ್ ಗೋ ಅಭಿಯಾನದ ಮೂಲಕ ಈ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.