ಕರ್ನಾಟಕ

karnataka

ETV Bharat / state

ಮೆಡಿಕಲ್​, ಇಂಜಿನಿಯರಿಂಗ್​ ಸೀಟ್​ಗಾಗಿ ಕನಿಷ್ಠ ಪರೀಕ್ಷೆ ಅಂಕಕ್ಕಾಗಿ ಸಿಇಟಿ ಪರೀಕ್ಷೆ: ಅಶ್ವತ್ಥ್ ನಾರಾಯಣ್ - ಪಿಯುಸಿ ಪರೀಕ್ಷೆ

ಯುಸಿ ಪರೀಕ್ಷೆ ರದ್ದಾಗಿದ್ದು, ಎಲ್ಲರೂ ಪಾಸ್ ಆಗಿದ್ದಾರೆ. ಪಿಯುಸಿ ನಂತರ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೀಟ್ ಪಡೆಯಲು ಕನಿಷ್ಠ ಅಂಕ ಬೇಕು.ಅದಕ್ಕಾಗಿ ಸಿಇಟಿ ಪರೀಕ್ಷೆ ಮಾನದಂಡ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

Ashwathth Narayan
ಅಶ್ವತ್ಥ್ ನಾರಾಯಣ್

By

Published : Jun 5, 2021, 3:13 PM IST

ಬೆಂಗಳೂರು: ಪಿಯುಸಿ ಪರೀಕ್ಷೆ ರದ್ದಾಗಿರುವ ಕಾರಣ. ಮೆಡಿಕಲ್, ಇಂಜಿನಿಯರಿಂಗ್ ಸೀಟ್ ಪಡೆಯಲು ಸಿಇಟಿ ಪರೀಕ್ಷೆ ಆಗಬೇಕು‌ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿ ಮಾತನಾಡಿದ ಅವರು, ಮೆಡಿಕಲ್, ಎಂಜಿನಿಯರಿಂಗ್​ ಸೀಟ್ ಪಡೆಯಲು ಕನಿಷ್ಠ ಪರೀಕ್ಷೆ ಅಂಕ ಬೇಕು. ಅದಕ್ಕೆ ಸಿಇಟಿ ಮೂಲಕ ಪರೀಕ್ಷೆ ನಡೆಸಲಾಗುವುದು. ಸಂಬಂಧಿಸಿದ ಅಧಿಕಾರಗಳ ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ. ಪರೀಕ್ಷೆ ಇಲ್ಲದೇ ಪಾಸ್ ಅಂತ ಮಾಡಬಹುದಿತ್ತು. ಆದರೆ, ಮುಂದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತ ಕಾಪಾಡಲು ಪರೀಕ್ಷೆ ಮಾಡಲಾಗುತ್ತಿದೆ.

ಸಚಿವ ಸುರೇಶ್​ ಕುಮಾರ್ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟ್ ಆಯ್ಕೆ ಮಾಡಬೇಕಾದರೆ ಕನಿಷ್ಠ ಮಾರ್ಕ್ಸ್ ಇತ್ತು. ಕನಿಷ್ಠ ಮಾರ್ಕ್ಸ್ ಈಗ ಅಡಚಣೆ ಆಗೋದು ಬೇಡ. ಸಿಇಟಿ ಮಾರ್ಕ್ಸ್ ಮಾತ್ರ ಪರಿಗಣನೆ ಆಗಲಿ ಎಂದಿದ್ದಾರೆ. ಸಿಇಟಿ ಆಧಾರದ ಮೇಲೆ ಆಯ್ಕೆ ಆಗಲಿ ಎಂದಿದ್ದಾರೆ. ಆ ದಿಕ್ಕಿನಲ್ಲಿ ಸಿಎಂ ಜೊತೆಗೆ ಚರ್ಚೆ ಮಾಡುತ್ತೇವೆ. ಇದಕ್ಕೆ ಕೆಲವು ತಿದ್ದುಪಡಿ ತರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

ಎಲ್ಲ ರೈತರಿಗೆ ತಕ್ಷಣ ಬಿತ್ತನೆ ಬೀಜ, ಗೊಬ್ಬರ ಪೂರೈಸುವಂತೆ ಸಿಎಂಗೆ ಸಿದ್ದರಾಮಯ್ಯ ಪತ್ರ

ABOUT THE AUTHOR

...view details