ಬೆಂಗಳೂರು : ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಇಂದು ಪ್ರಕಟಿಸಿದ್ದಾರೆ.
ಜೆಇಇ, ನೀಟ್ ಮುಂತಾದ ಪರೀಕ್ಷೆಗಳ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಬಹುತೇಕ ಅಕ್ಟೋಬರ್‌ನಲ್ಲಿ ನಡೆಸುವುದು ಖಚಿತ. ಎಐಸಿಟಿ ಸೂಚನೆಯಂತೆ ನಡೆಯಲಿದೆ. ಆನ್‌ಲೈನ್ ಕೌನ್ಸೆಲಿಂಗ್‌ಗೆ ತಯಾರಿ ಮಾಡಿಕೊಂಡಿದ್ದೇವೆ. ಒಟ್ಟು ಎರಡು ಸುತ್ತಿನ ಕೌನ್ಸೆಲಿಂಗ್ ಮತ್ತು ಅಂತಿಮವಾಗಿ ಒಂದು ವಿಸ್ತರಣಾ ಸುತ್ತು ಇರುತ್ತದೆ. ಇದು ಕೇವಲ ಬದಲಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ಮ್ಯಾಪಪ್ ರೌಂಡ್ ಆಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ದಾಖಲೆ ಸಲ್ಲಿಸಿ ಕಾಲೇಜು ಪ್ರವೇಶ ಪಡಿಯಿರಿ :2 ನೇ ಸುತ್ತಿನ ಕೌನ್ಸೆಲಿಂಗ್ ಮುಗಿಯುತ್ತಿದ್ದಂತೆ ತಮ್ಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು, ಕೊಂಚವೂ ತಡ ಮಾಡದೇ ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬೇಕು. ಒಂದು ವೇಳೆ ಶುಲ್ಕ ಪಾವತಿ ಮಾಡಿ ದಾಖಲೆಗಳನ್ನು ಸಲ್ಲಿಸದಿದ್ದರೆ, ಆ ಪ್ರವೇಶಾತಿ ತಾನಾಗಿಯೇ ರದ್ದಾಗುತ್ತದೆ. ಈ ಅಂಶವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು.
ಯಾವ್ಯಾವ ಕೋರ್ಸ್ನಲ್ಲಿ ಯಾರಿಗೆ ಱಂಕ್ :
ಎಂಜಿನಿಯರಿಂಗ್:
1. ಎಂ. ರಕ್ಷಿತ್ : ಬೆಂಗಳೂರಿನ ಆರ್.ವಿ. ಪಿಯು ಕಾಲೇಜು
2. ಆರ್. ಶುಭನ್ : ಬೆಂಗಳೂರಿನ ಶ್ರೀ ಚೈತನ್ಯ ಇ ಟೆಕ್ನೋ ಕಾಲೇಜು
3. ಎಂ.ಶಶಾಂಕ್ ಬಾಲಾಜಿ : ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜು
4. ಪಿ. ಶಶಾಂಕ್ : ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು
5. ಸಂದೀಪನ್ ನಸ್ಕರ್ : ಹೊರನಾಡ ಕನ್ನಡಿಗ ವಿದ್ಯಾರ್ಥಿ
ಬಿಎಸ್ಸಿ ಕೃಷಿ :
1. ವರುಣ್ ಗೌಡ ಎ.ಬಿ : ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು
2. ಕೆ. ಸಂಜನಾ : ಮೈಸೂರು ಬೇಸ್ ಕಾಲೇಜು
3. ಲೋಕೇಶ್ ಬಿ. ಜೋಗಿ : ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲ ಪಿಯು ಕಾಲೇಜು
4. ಪಿ.ಪಿ. ಅರನವ್ ಅಯ್ಯಪ್ಪ: ಮೂಡಬಿದಿರೆಯ ಆಳ್ವಾಸ್ ಕಾಲೇಜು
5. ಪ್ರಜ್ವಲ್ ಕಶ್ಯಪ್ : ಬೆಂಗಳೂರಿನ ವಿದ್ಯಾಮಂದಿರ ಪಿಯು ಕಾಲೇಜು
ಪಶುವೈದ್ಯ ವಿಜ್ಞಾನ :
1. ಪಿ. ಸಾಯಿ ವಿವೇಕ್ : ಬೆಂಗಳೂರಿನ ನಾರಾಯಣ ಇ- ಟೆಕ್ನೋ ಕಾಲೇಜು
2. ಆರ್ಯನ್ ಮಹಾಲಿಂಗಪ್ಪ ಚನ್ನಲ್ : ಕೋಟಾದ ಪ್ರಗತಿ ಪಬ್ಲಿಕ್ ಶಾಲೆ
3. ಕೆ. ಸಂಜನಾ : ಮೈಸೂರಿನ ಬೇಸ್ ಕಾಲೇಜು
4. ಪವನ್ ಎಸ್. ಗೌಡ : ಬೆಂಗಳೂರು ನಾರಾಯಣ ಪಿಯು ಕಾಲೇಜು
5. ಪಿ.ಪಿ. ಅರ್ನವ್ ಅಯ್ಯಪ್ಪ : ಮೂಡಬಿದಿರೆಯ ಆಳ್ವಾಸ್ ಕಾಲೇಜು
ಬಿ ಫಾರ್ಮಾ ಮತ್ತು ಡಿ ಫಾರ್ಮಾ:
1. ಪಿ. ಸಾಯಿ ವಿವೇಕ್ : ಬೆಂಗಳೂರಿನ ನಾರಾಯಣ ಇ- ಟೆಕ್ನೋ ಕಾಲೇಜು
2. ಸಂದೀಪನ್ ನಸ್ಕರ್ : ಹೊರನಾಡ ಕನ್ನಡಿಗ ವಿದ್ಯಾರ್ಥಿ
3. ಪವನ್ ಎಸ್. ಗೌಡ : ಬೆಂಗಳೂರು ನಾರಾಯಣ ಪಿಯು ಕಾಲೇಜು
4. ಆರ್ಯನ್ ಮಹಾಲಿಂಗಪ್ಪ ಚನ್ನಲ್ : ಕೋಟಾದ ಪ್ರಗತಿ ಪಬ್ಲಿಕ್ ಶಾಲೆ
5. ಕೆ. ಸಂಜನಾ: ಮೈಸೂರಿನ ಬೇಸ್ ಕಾಲೇಜು
ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ :
1. ಪಿ.ಪಿ. ಅರನವ್ ಅಯ್ಯಪ್ಪ: ಮೂಡಬಿದಿರೆಯ ಆಳ್ವಾಸ್ ಕಾಲೇಜು
2. ಕೆ. ಸಂಜನಾ : ಮೈಸೂರಿನ ಬೇಸ್ ಕಾಲೇಜು
3. ಪಿ. ಸಾಯಿ ವಿವೇಕ್ : ಬೆಂಗಳೂರಿನ ನಾರಾಯಣ ಇ- ಟೆಕ್ನೋ ಕಾಲೇಜು
4. ಕಾರ್ತಿಕ್ ರೆಡ್ಡಿ : ಬೀದರಿನ ಶಾಹಿನ್ ಐಎನ್’ಡಿಪಿ ಕಾಲೇಜು
5. ವರುಣ್ ಗೌಡ ಎ.ಬಿ: ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು