ಕರ್ನಾಟಕ

karnataka

By

Published : Aug 24, 2020, 10:55 PM IST

Updated : Aug 24, 2020, 11:38 PM IST

ETV Bharat / state

ಕೊರೊನಾ‌ ಭೀತಿ: ಸೆ.2ರಿಂದ ಸಿಇಟಿ ಆನ್​ಲೈನ್​ ಕೌನ್ಸೆಲಿಂಗ್ ಆರಂಭ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೂತನ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಸಾರಿಯ ಸಿಇಟಿ ಕೌನ್ಸೆಲಿಂಗ್ ಆನ್​ಲೈನ್ ಮೂಲಕ ನಡೆಯಲಿದ್ದು ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ನಿಗದಿತ ಲಿಂಕ್​ಅನ್ನು ಆಯ್ಕೆ ಮಾಡಿ ಪ್ರತಿಯೊಂದು ದಾಖಲೆಗಳನ್ನೂ ಅಪ್​​ಲೋಡ್ ಮಾಡುವಂತೆ ತಿಳಿಸಿದೆ.

CET Counseling begins From September 2
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಹರಡುವಿಕೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಈ ಬಾರಿ ಸಿಇಟಿ ಕೌನ್ಸೆಲಿಂಗ್ ಆನ್​ಲೈನ್ ಮೂಲಕ ನಡೆಯಲಿದೆ. ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್ ಪ್ರವೇಶಾತಿ ಸೀಟು ಹಂಚಿಕೆ ಸೆಪ್ಟೆಂಬರ್ 2ರಿಂದ 24ರ ವರೆಗೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಸಿಇಟಿ ಕೌನ್ಸಿಲಿಂಗ್ ವೇಳಾಪಟ್ಟಿ

ಸೀಟು ಹಂಚಿಕೆಗೆ ನಿಗದಿಪಡಿಸಿರುವ ವೇಳಾಪಟ್ಟಿಗೆ ಅನುಸಾರವಾಗಿ ಅರ್ಹ ಅಭ್ಯರ್ಥಿಗಳು ದಾಖಲಾತಿಗಳು ಹಾಗೂ ಪ್ರಮಾಣ ಪತ್ರಗಳನ್ನು ಪಿಡಿಎಫ್ ರೂಪದಲ್ಲಿ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ನಿಗದಿತ ಲಿಂಕ್​ಅನ್ನು ಆಯ್ಕೆ ಮಾಡಿ ಪ್ರತಿಯೊಂದು ದಾಖಲೆಗಳನ್ನೂ ಅಪ್​​ಲೋಡ್ ಮಾಡಬೇಕಲಾಗುತ್ತದೆ.

ಸೀಟು ಹಂಚಿಕೆ ಪ್ರಕ್ರಿಯೆ ಆನ್​ಲೈನ್ ಮುಖಾಂತರ ನಡೆಯುವುದರಿಂದ ಅಭ್ಯರ್ಥಿಗಳು, ಪೋಷಕರು ದಾಖಲಾತಿ ಪರಿಶೀಲನೆಗಾಗಿ ಯಾವುದೇ ಸಹಾಯಕ ಕೇಂದ್ರಗಳಿಗೆ ಬರುವ ಅಗತ್ಯವಿರುವುದಿಲ್ಲ. ಆಯಾ ರ‍್ಯಾಂಕ್​ಗಳಿಗೆ ನಿಗದಿಪಡಿಸಿದ ದಿನಾಂಕಗಳಲ್ಲಿ ವಿದ್ಯಾರ್ಥಿಗಳು ನೀಡಬೇಕಾದ ದಾಖಲೆಗಳ ವಿವರಗಳನ್ನು ವೆಬ್​ಸೈಟ್ ನೀಡಲಾಗಿದೆ.

ಸೀಟು ಹಂಚಿಕೆ ದಿನಾಂಕ ಹಾಗೂ ಸೀಟುಗಳ ಸಂಖ್ಯೆ

  • 2-9-2020 1 ರಿಂದ 2000
  • 4-9-2020 2,001 ರಿಂದ 7,000
  • 7-9-2020 7,001 ರಿಂದ 15,000
  • 10-9-2020 15,001 ರಿಂದ 25,000
  • 13-9-2020 25,001 ರಿಂದ 40,000
  • 16-9-2020 40,001 ರಿಂದ 70,000
  • 20-9-2020 70,001 ರಿಂದ 1,00,000
  • 24-9-2020 1,00,001 ರಿಂದ ಕೊನೆಯ ರ‍್ಯಾಂಕ್‌ ವರೆಗೆ
Last Updated : Aug 24, 2020, 11:38 PM IST

ABOUT THE AUTHOR

...view details