ಬೆಂಗಳೂರು:ಸಿಇಟಿ-2020ರ ಸಾಮಾನ್ಯ ಪ್ರವೇಶ ಪರೀಕ್ಷೆ ಮುಗಿದಿದ್ದು, ಇದೀಗ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ತಾತ್ಕಾಲಿಕ ಸರಿ ಉತ್ತರಗಳನ್ನ ಪ್ರಾಧಿಕಾರವು ತನ್ನ ವೆಬ್ಸೈಟ್ http://kea.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.
ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆನ್ಲೈನ್ ಮೂಲಕ ಆಗಸ್ಟ್ 8 ರಂದು ಸಂಜೆ 5:30ರೊಳಗೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ವಿಷಯದ ಹೆಸರು, ವರ್ಷನ್ ಕೋಡ್, ಪ್ರಶ್ನೆ ಪ್ರತಿಕೆಯ ಪ್ರಶ್ನೆ ಸಂಖ್ಯೆ ಮತ್ತು ನಿರ್ದಿಷ್ಟವಾದ ನಿಗದಿತ ಆಕ್ಷೇಪಣೆಯನ್ನು ಎಲ್ಲಾ ವಿವರಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದೆ ಅಥವಾ ಆಧಾರ ರಹಿತ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ನೀಡುವ ಕೀ ಉತ್ತರಗಳನ್ನು ಅಂತಿಮವಾಗಿರುತ್ತದೆ.