ಬೆಂಗಳೂರು :ಕೋವಿಡ್ ಸಮಯದಲ್ಲಿ ಅಂತಾರಾಜ್ಯದಿಂದ ರೈಲ್ವೆ, ವಿಮಾನ, ರಸ್ತೆ ಮಾರ್ಗದಲ್ಲಿ ಬಂದವರ ಹೋಮ್ ಕ್ವಾರಂಟೈನ್ ಮೇಲೆ ನಿಗಾ ಇಟ್ಟು, ಬಿಬಿಎಂಪಿ ಜೊತೆ ಕೈಜೋಡಿಸಿ ದುಡಿದ, ನೆರೆಹೊರೆ ಆಸರೆ ತಂಡದ ನಾಲ್ಕು ಸಾವಿರ ಮಂದಿಯನ್ನು ಗುರುತಿಸಿ ಪ್ರಶಂಸನಾ ಪ್ರಮಾಣ ಪತ್ರ ನೀಡಲಾಯ್ತು.
ಕೋವಿಡ್ ಸಂಕಷ್ಟದಲ್ಲಿ ಸ್ವಯಂಸೇವಕರಾಗಿ ದುಡಿದವರಿಗೆ ಪ್ರಶಂಸನಾ ಪ್ರಮಾಣ ಪತ್ರ - those who volunteered to work at Kovid time
ನಗರದಾದ್ಯಂತ 26 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡು, ಸ್ವಯಂಸೇವಕ ಕೋವಿಡ್ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಸಾಂಕೇತಿಕ 88 ಮಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರಶಂಸನಾ ಪತ್ರ ವಿತರಿಸಲಾಗಿದೆ..
ನಗರದಾದ್ಯಂತ 26 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡು, ಸ್ವಯಂಸೇವಕ ಕೋವಿಡ್ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಸಾಂಕೇತಿಕ 88 ಮಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರಶಂಸನಾ ಪತ್ರ ವಿತರಿಸಲಾಗಿದೆ.
ಈ ವೇಳೆ ಮಾತನಾಡಿದ ಆಯುಕ್ತರಾದ ಮಂಜುನಾಥ್ ಪ್ರಸಾದ್, ಕೋವಿಡ್-19 ಸೋಂಕಿನ ಸಂದಿಗ್ಧ ಸಂದರ್ಭದಲ್ಲಿ, ಕಳೆದ ಆರು ತಿಂಗಳಿಂದ ಕ್ಲಿಷ್ಟಕರ ಕೆಲಸವನ್ನು ಸ್ವಯಂಸೇವಕ ಕೋವಿಡ್ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿದ್ದೀರಿ. ಸ್ವಯಂಸೇವಕರಾಗಿ ಮುಂದೆ ಬಂದು ಕೆಲಸ ಮಾಡುವುದು ಸುಲಭದ ಮಾತಲ್ಲ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿರುವವರಿಗೆ ಧನ್ಯವಾದ ತಿಳಿಸಿದರು.