ಬೆಂಗಳೂರು : ರಮಡ ರೆಸಾರ್ಟ್ನಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪಾಲುದಾರಿಕೆ ಹೊಂದಿದ್ದರೆ ಎನ್ನುವ ಊಹಾಪೋಹಕ್ಕೆ ಸ್ಪಸ್ಟೀಕರಣ ನೀಡಿರುವ ರಮಡ ಹಾಗೂ ಸಾಯಿಲೀಲಾ ಹೋಟೆಲ್ ಸಿಇಒ ಮಹೇಶ್ ಆರೋಪಕ್ಕೆ ತೆರೆ ಎಳೆದಿದ್ದಾರೆ.
ರಮಡ ಹೋಟೆಲ್ ನಲ್ಲಿ ಯಾವ ಪ್ರಭಾವಿ ಶಾಸಕರ ಪಾಲುದಾರಿಕೆಯೂ ಇಲ್ಲ : ಸಿಇಒ ಸ್ಪಷ್ಟನೆ - Kannada news
ಕೆಲವೊಂದು ಚಾನಲ್ಗಳು ರಮಡ ರೆಸಾರ್ಟ್ ನಲ್ಲಿ ಪ್ರಭಾವಿ ಶಾಸಕರ ಪಾಲುದಾರಿಕೆ ಇದೆ ಎಂದು ಪ್ರಸಾರ ಮಾಡುತ್ತಿದ್ದಾರೆ. ನಮ್ಮದು ಉದ್ಯಮಿ ಕುಟುಂಬ ನಮ್ಮ ವ್ಯವಹಾರಕ್ಕೆ ರಾಜಕೀಯದ ಲೇಪ ಬೇಡ ಎಂದು ರಮಡ ಹಾಗೂ ಸಾಯಿಲೀಲಾ ಹೋಟೆಲ್ ಸಿಇಒ ಮಹೇಶ್ ಮನವಿ ಮಾಡಿದ್ದಾರೆ.
ರೆಸಾರ್ಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೊಂದು ಚಾನಲ್ಗಳು ರಮಡ ರೆಸಾರ್ಟ್ನಲ್ಲಿ ಪ್ರಭಾವಿ ಶಾಸಕರ ಪಾಲುದಾರಿಕೆ ಇದೆ ಎಂದು ಪ್ರಸಾರ ಮಾಡುತ್ತಿದ್ದಾರೆ. ನಮ್ಮದು ಉದ್ಯಮಿ ಕುಟುಂಬ ನಮ್ಮ ವ್ಯವಹಾರಕ್ಕೆ ರಾಜಕೀಯದ ಲೇಪ ಬೇಡ ಎಂದು ಮನವಿ ಮಾಡಿದರು. ಬಿಜೆಪಿಯವರು ನಮ್ಮ ರಮಡ 36 ಹಾಗೂ ಸಾಯಿಲೀಲಾದಲ್ಲಿ 22 ರೂಮ್ಗಳನ್ನ ಬುಕ್ ಮಾಡಿದ್ದಾರೆ.
ಪ್ರತಿ ರೂಮ್ ಗೆ 30 ರಿಂದ 40 ಸಾವಿರ ಎಂದು ಪ್ರಸಾರ ಮಾಡಲಾಗುತ್ತಿದೆ, ದಯವಿಟ್ಟು ಇಂತಹ ಊಹಾಪೋಹ ಸುದ್ದಿಗಳನ್ನು ಪ್ರಸಾರ ಮಾಡಬೇಡಿ. ರಮಡದಲ್ಲಿ 4 ಸಾವಿರದಿಂದ 6 ಸಾವಿರ ಹಾಗೂ 3,500 ರೂ.ಚಾರ್ಜ್ ಮಾಡುತ್ತಿದ್ದೇವೆ. ನಾವು ಉಪಾಹಾರ ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಅಥಿತಿಗಳಂತೆ ಸಾಮಾನ್ಯವಾಗಿಯೇ ಸತ್ಕರಿಸುತ್ತಿದ್ದೇವೆ ಎಂದು ಸ್ಪಷ್ಟ ಪಡಿಸಿದರು.