ಕರ್ನಾಟಕ

karnataka

ETV Bharat / state

ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಕೇಂದ್ರ: 100 ಕೋಟಿ ರೂ. ರಿಲೀಸ್​ ಮಾಡಿದ ಸಿಎಂ! - ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ರೌದ್ರನರ್ತನ ತಾಂಡವವಾಡುತ್ತಿದ್ದು, ಇದೀಗ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ದಾವಿಸಿದೆ. ಪ್ರವಾಹ ನಿರ್ವಹಣೆ, ಮಳೆ ಹಾರಿ ಪರಿಹಾರಕ್ಕೆ ಕೇಂದ್ರ 204 ಕೋಟಿ ರೂ ನೀಡಲು ಮುಂದಾಗಿದ್ದು, ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಕೂಡ 100ಕೋಟಿ ರೂ ರಿಲೀಸ್​ ಮಾಡಿದ್ದಾರೆ.

ಬಿಎಸ್​ವೈ ಸಭೆ/BS Yadiyurappa

By

Published : Aug 8, 2019, 11:53 PM IST

Updated : Aug 9, 2019, 12:00 AM IST

ಬೆಂಗಳೂರು:ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ನಿರ್ವಹಣೆ ಹಾಗು ಮಳೆ ಹಾನಿ ಪರಿಹಾರಕ್ಕಾಗಿ ಕೇಂದ್ರ ಸರಕಾರ ರಾಜ್ಯಕ್ಕೆ 204 ಕೋಟಿ ರೂ ಪರಿಹಾರದ ಹಣ ಮಂಜೂರು ಮಾಡಿದೆ.ಮೊದಲ ಕಂತಲ್ಲಿ ಈಗಾಗಲೇ 78 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದ್ದು, ಎರಡನೇ ಕಂತಿನ ಹಣ 126 ಕೋಟಿ ರೂ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದೆಂದು ರಾಜ್ಯ ಸರಕಾರಕ್ಕೆ ತಿಳಿಸಿದೆ.

ರಾಜ್ಯದಲ್ಲಿ ಪ್ರವಾಹ ಪೀಡಿತವಾಗಿರುವ 12 ಜಿಲ್ಲೆಗಳ ಪರಿಸ್ಥಿತಿ, ಮಳೆಹಾನಿ ಬಗ್ಗೆ ಮುಖ್ಯ ಕಾರ್ಯದರ್ಶಿ ನೀಡಿರುವ ವರದಿ ಬಗ್ಗೆ ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದಲ್ಲಿ ಗುರುವಾರ ದೆಹಲಿಯಲ್ಲಿ ಸಭೆ ನಡೆಸಿದ ಕೇಂದ್ರ ಸರಕಾರ ರಾಜ್ಯ ಪೃಕೃತಿ ವಿಕೋಪ ಪರಿಹಾರ ಯೋಜನೆಯಡಿ ರಾಜ್ಯ ಸರಕಾರದ ಕೋರಿಕೆಯಂತೆ ಹಣ ನೀಡುವ ಭರವಸೆ ನೀಡಿದೆ.

ಹನ್ನೆರಡು ಜಿಲ್ಲೆಗಳ 51 ತಾಲೂಕುಗಳು ಪ್ರವಾಹ ಹಾಗು ಮಳೆಯಿಂದ ಹಾನಿಗೊಳಗಾಗಿವೆ ಸುಮಾರು 85 ಸಾವಿರ ಜನರನ್ನು ಅಪಾಯ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ‌ ಮಾಡಲಾಗಿದೆ. ಮಳೆ ಪರಿಹಾರ ಕೇಂದ್ರಗಳಲ್ಲಿ 17 ಸಾವಿರ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಕೇಂದ್ರದ ಸೇನೆ, ಎನ್​ಡಿಆರ್​ಎಫ್, ನೌಕಾದಳ, ವಾಯುಸೇನೆಯಿಂದ ಉತ್ತಮ ಸಹಕಾರ ದೊರೆತಿದೆ ಎಂದು ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ ಎಂದು ಮನಗಂಡ ಕೇಂದ್ರ ಸರಕಾರ ತಕ್ಷಣ ರಾಜ್ಯದ ನೆರವಿಗೆ ಧಾವಿಸಿದೆ. ಸೇನೆಯ ಸಹಾಯದ ಜತೆಗೆ ತುರ್ತು ಸಂದರ್ಭ ನಿಭಾಯಿಸಲು ಆರ್ಥಿಕ ಸಹಾಯವನ್ನೂ ನೀಡಿದೆ.

100 ಕೋಟಿ ತುರ್ತು ಪರಿಹಾರ ರಿಲೀಸ್​ ಮಾಡಿದ ಬಿಎಸ್​ವೈ

ಇದರ ಮಧ್ಯೆ ರಾಜ್ಯ ಸರ್ಕಾರ ಕೂಡ ತಕ್ಷಣ 100ಕೋಟಿ ರೂ ಬಿಡುಗಡೆ ಮಾಡಿದ್ದು, ನೆರೆ ಹಾವಳಿಗೆ ಒಳಗಾಗಿರುವ ವಿವಿಧ ಜಿಲ್ಲೆಗಳಿಗೆ ಹಣ ಹಂಚಿಕೆ ಮಾಡಿದೆ ಎಂದು ತಿಳಿದು ಬಂದಿದೆನಾಳೆ ಬಿಎಸ್​ವೈ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಕೃಷ್ಣ,ಮಲಪ್ರಭಾ,ಘಟಪ್ರಭಾ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆಂದು ಮಾಜಿ ಸಚಿವ ಗೋವಿಂದ್​ ಕಾರಜೋಳ ತಿಳಿಸಿದ್ದಾರೆ. ಬಾಗಲಕೋಟೆಗೆ 10 ಕೋಟಿ ಹಾಗೂ ವಿಜಯಪುರಕ್ಕೆ 5ಕೋಟಿ ರೂ ರಿಲೀಸ್​ ಮಾಡಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. .

Last Updated : Aug 9, 2019, 12:00 AM IST

ABOUT THE AUTHOR

...view details