ಯಲಹಂಕ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಅವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ - 2021ಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ(shobha karandlaje ) ಭೇಟಿ ನೀಡಿದರು ಇದೇ ವೇಳೆ ಅವರು ಎತ್ತಿನಬಂಡಿ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದರು.
ನವೆಂಬರ್ 11 ರಿಂದ ನಡೆಯುತ್ತಿರುವ ಕೃಷಿ ಮೇಳ 4 ದಿನಗಳ ಕಾಲ ನಡೆಯಲಿದ್ದು, 3 ನೇ ದಿನವಾದ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು, ಭೇಟಿ ಸಮಯದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರು, ಮೇಳಕ್ಕೆ ಬಂದಿದ್ದ ರೈತರೂಂದಿಗೆ ಮಾತನಾಡಿದರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ರಾಜೇಂದ್ರಪ್ರಸಾದ್ ಸಚಿವರಿಗೆ ಸಾಥ್ ನೀಡಿದರು.