ಬೆಂಗಳೂರು : ಐತಿಹಾಸಿಕ 13ನೇ ಆವೃತ್ತಿಯ ಏರೋ ಇಂಡಿಯಾ 2021 ಇಂದು ಭರ್ಜರಿ ಚಾಲನೆ ಕಂಡಿದೆ. ಇನ್ನು ಇದೇ ವೇಳೆ ಕೇಂದ್ರ ಸರ್ಕಾರ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ 83 ತೇಜಸ್ ಲೈಟ್ ಕಾಂಬ್ಯಾಟ್ ಯುದ್ಧ ವಿಮಾನಗಳನನ್ನು ಖರೀದಿಸಲು 48 ಸಾವಿರ ಕೋಟಿ ಕೊಟ್ಟು ಕೊಂಡುಕೊಳ್ಳುವ ಒಪ್ಪಂದಕ್ಕೆ ಬುಧವಾರ ಸಹಿಯಾಕಿದೆ.
ಈ ಒಪ್ಪಂದಕ್ಕೆ ಇಂದು ನಡೆದ ಏರೋ ಇಂಡಿಯಾ 2021 ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ರಕ್ಷಣ ಸಚಿವಾಲಯದ ಮಹಾನಿರ್ಧೇಶಕ ವಿಎಲ್ ಕಾಂತರಾವ್ ಅವರು ಹೆಚ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧದವನ್ ಅವರಿಗೆ ಈ ಒಪ್ಪಂದದ ಕರಾರು ಪತ್ರವನ್ನು ಹಸ್ಥಾಂತರಿಸಿದರು.