ಬೆಂಗಳೂರು: ಕೇಂದ್ರ ಸರ್ಕಾರವು ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ 2ಎ ಮತ್ತು 2 ಬಿಗೆ ಅನುಮೋದನೆ ನೀಡಿರುವ ಕುರಿತು ಕೇಂದ್ರ ಸಚಿವ ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
'ನಮ್ಮ ಮೆಟ್ರೋ' ಹಂತ 2ಎ ಮತ್ತು 2 ಬಿಗೆ ಕೇಂದ್ರ ಅಸ್ತು - green signal to Metro Phase 2A and 2B
ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಹೆಬ್ಬಾಳ ಜಂಕ್ಷನ್ ಮೂಲಕ ಒಟ್ಟು ಉದ್ದ 58.19 ಕಿ.ಮೀ ಇದೆ. 14,788.101 ಕೋಟಿ ರೂ. ವೆಚ್ಚದಲ್ಲಿ ಈ ಮೆಗಾ ಯೋಜನೆ ಅನುಮೋದನೆಯಾದ ದಿನಾಂಕದಿಂದ 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.
!['ನಮ್ಮ ಮೆಟ್ರೋ' ಹಂತ 2ಎ ಮತ್ತು 2 ಬಿಗೆ ಕೇಂದ್ರ ಅಸ್ತು ಡಿವಿಎಸ್ ಟ್ವೀಟ್](https://etvbharatimages.akamaized.net/etvbharat/prod-images/768-512-12046669-thumbnail-3x2-dgj.jpg)
ಡಿವಿಎಸ್ ಟ್ವೀಟ್
ಈ ಯೋಜನೆಯು ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಹೆಬ್ಬಾಳ ಜಂಕ್ಷನ್ ಮೂಲಕ ಒಟ್ಟು ಉದ್ದ 58.19 ಕಿ.ಮೀ ಇದೆ. 14,788.101 ಕೋಟಿ ರೂ. ವೆಚ್ಚದಲ್ಲಿ ಈ ಮೆಗಾ ಯೋಜನೆ ಅನುಮೋದನೆಯಾದ ದಿನಾಂಕದಿಂದ 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗಿನ ಐಟಿ ಇಂಡಸ್ಟ್ರಿ ಉದ್ಯೋಗಿಗಳಿಗೆ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಸಹಾಯವಾಗಲಿದೆ. ರಾಜ್ಯ ಸರ್ಕಾರವು ಜನವರಿ 2019ರಲ್ಲಿ ಅನುಮೋದನೆ ನೀಡಿತ್ತು, ಇದೀಗ ಕೇಂದ್ರ ಸರ್ಕಾರವೂ ಅನುಮೋದನೆ ನೀಡಿದೆ.