ಕರ್ನಾಟಕ

karnataka

ETV Bharat / state

ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ: ರಾಜ್ಯಕ್ಕೆ 1,200 ಕೋಟಿ ರೂ. ಮಧ್ಯಂತರ ನೆರೆ ಪರಿಹಾರ - Flood Relief Release from NDRF Fund

ನೆರೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1,200 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ.

ನೆರೆ ಪರಿಹಾರ ಘೋಷಣೆ

By

Published : Oct 4, 2019, 9:12 PM IST

Updated : Oct 4, 2019, 9:46 PM IST

ಬೆಂಗಳೂರು: ನೆರೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1,200 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ.

ಎನ್​ಡಿಆರ್​ಎಫ್ ನಿಧಿಯಡಿ ಈ ಪರಿಹಾರವನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗುವುದೆಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯಕ್ಕೆ ಮೊದಲ ಕಂತಿನಲ್ಲಿ 3,800 ಕೋಟಿ ರೂ. ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರ ಕೇಂದ್ರವನ್ನು ಕೋರಿತ್ತು.

ನೆರೆಯಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಸುಮಾರು 35 ಸಾವಿರ ಕೋಟಿ ರೂಪಾಯಿ ನಷ್ಟವುಂಟಾಗಿದೆ. ಎನ್​ಡಿಆರ್​ಎಫ್ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ನೆರೆ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ಸಾಕಷ್ಟು ಹಗ್ಗಜಗ್ಗಾಟ ನಡೆಸಿದ ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದು ಇದೀಗ ಅಲ್ಪಮೊತ್ತದ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ.

ಕರ್ನಾಟಕ ಮತ್ತು ಬಿಹಾರ ರಾಜ್ಯಗಳ ನೆರೆ ಪರಿಹಾರಕ್ಕಾಗಿ ಎನ್​ಡಿಆರ್​ಎಫ್ ನಿಧಿಯಡಿ ಒಟ್ಟು 1,813.75 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ರಿಲೀಸ್ ಮಾಡಿದ್ದು, ಅದರಲ್ಲಿ ಬಿಹಾರ ರಾಜ್ಯದ 400 ಕೋಟಿ ರೂ. ಸೇರಿದೆ.

Last Updated : Oct 4, 2019, 9:46 PM IST

ABOUT THE AUTHOR

...view details