ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಹಿನ್ನೆಲೆ ಕೇಂದ್ರ ಸರ್ಕಾರ ಕೊನೆಗೂ ಪರಿಹಾರ ಘೋಷಿಸಿದೆ.
ಕೇಂದ್ರ ಸರ್ಕಾರದಿಂದ ರಾಜ್ಯ ಬರ ಪರಿಹಾರಕ್ಕೆ ಘೋಷಣೆಯಾದ ಹಣವೆಷ್ಟು ಗೊತ್ತೆ? - componsation to Neighborhood
ಕೇಂದ್ರ ಸರ್ಕಾರವು ರಾಜ್ಯದ ಬರ ಪರಿಹಾರಕ್ಕೆ ₹ 1029 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಈ ಹಿಂದೆ ಉಂಟಾದ ಭೀಕರ ಬರಕ್ಕೆ ಕೇಂದ್ರದಿಂದ ನೆರವು ಘೋಷಣೆ ಮಾಡಲಾಗಿದೆ.
ರಾಜ್ಯದ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ₹1,029 ಕೋಟಿ ಘೋಷಿಸಿದ್ದು, ಈ ಹಣ ತುಂಬಾ ಕಡಿಮೆ ಆಯಿತು ಎಂದು ಹಾಗೂ ಕೇಂದ್ರ ಮತ್ತೆ ಮಲತಾಯಿ ಧೋರಣೆ ತೋರಿದೆ ಎಂದು ಪ್ರತಿಪಕ್ಷ ನಾಯಕರು ದೂರುದ್ದಾರೆ.
ಕಳೆದ ವರ್ಷ ಹಿಂಗಾರು ಅವಧಿಯಲ್ಲಿ ಸಂಭವಿಸಿದ ಬರಕ್ಕೆ ಕೇಂದ್ರ ಸರ್ಕಾರ ಈಗ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕದಂತೆ ಒಡಿಶಾ ಕೂಡ ಬರಕ್ಕೆ ತುತ್ತಾಗಿತ್ತು. ಆದರೆ, ಒಡಿಶಾಗೆ ಕೇಂದ್ರ ಸರ್ಕಾರ ಬರೋಬ್ಬರಿ ₹ 3,338 ಕೋಟಿ ನೀಡಿದೆ. ಈ ಹಿನ್ನೆಲೆ ರಾಜ್ಯದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಲತಾಯಿ ದೋರಣೆ ನಡೆಸಲಾಗಿದೆ ಎಂದು ಆರೋಪ ಮಾಡಿದ್ದಾರೆ.