ಬೆಂಗಳೂರು:ಕೇಂದ್ರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸೌಮೇಂದ್ರ ಮುಖರ್ಜಿ ಹಾಗೂ ಕೇಂದ್ರ ವಿಭಾಗದ ಅನುಚೇತ್ ಭೇಷ್ ಎಂದಿದ್ದಾರೆ.
ಮೂರು ಠಾಣಾ ವ್ಯಾಪ್ತಿಯಲ್ಲಿ 5 ಕೆಜಿ ಚಿನ್ನಾಭರಣ, ಐದೂವರೆ ಕೆಜಿ ಬೆಳ್ಳಿ ಜಪ್ತಿ ಮಾಡಿ ಸಂಬಂಧಪಟ್ಟವರಿಗೆ ಕೊಟ್ಟಿದ್ದು, ಚಿನ್ನಾಭರಣ ಕಳೆದುಕೊಂಡವರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಬಹುಮಾನ ಕೂಡ ನೀಡಿದ್ದಾರೆ.
ಕಬ್ಬನ್ ಪಾರ್ಕ್ ಠಾಣೆ:
ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಎಂಜಿ ರಸ್ತೆಯಲ್ಲಿನ ನವರತ್ನನ್ ಜುವೆಲರಿ ಅಂಗಡಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಒರಿಸ್ಸಾ ಮೂಲದ ಲಂಭೋಧರ ಬಿಸ್ವಾಲ್ ಬಂಧಿತ ಆರೋಪಿ. ಈತ ಅಂಗಡಿಯಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅಂಗಡಿಯ ಪ್ರತಿಯೊಂದು ಮಾಹಿತಿಯನ್ನ ಪಡೆದು ವ್ಯಾಪಾರವನ್ನು ಸಂಪುರ್ಣವಾಗಿ ಕಂಪ್ಯೂಟರೀಕರಣಗೊಳಿಸುವ ಮಾಹಿತಿ ಸಂಗ್ರಹಿಸಿದ್ದಾನೆ. ನಂತರ ಮಾಲೀಕರಿಗೆ ಗೊತ್ತಾಗದ ಹಾಗೆ ಅಂಗಡಿಯ ಚಿನ್ನಾಭರಣದ ಮಾಹಿತಿ ಬದಲಾಯಿಸಿದ್ದ. ಬಳಿಕ ಚಿನ್ನಾಭರಣ ಕಳ್ಳತನ ಮಾಡಿ ಒರಿಸ್ಸಾ ರಾಜ್ಯಕ್ಕೆ ಪರಾರಿಯಾಗಿದ್ದ. ಹೀಗಾಗಿ ಆರೋಪಿಯನ್ನ ಬಂಧಿಸಿ 1 ಕೋಟಿ ರೂ. ಮೌಲ್ಯದ 1.5 ಕೆಜಿ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ. ತನಿಖೆ ವೇಳೆ ಮೋಜು-ಮಸ್ತಿ, ದುಶ್ಚಟಗಳಿಗೆ ಈ ರೀತಿ ಮಾಡಿರುವುದು ಬೆಳಕಿಗೆ ಬಂದಿದೆ.