ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್​ 2022: ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ, ಐಐಐಟಿಗೆ ಅನುದಾನ ಘೋಷಣೆ - Union Finance Minister Nirmala Sitharaman

ಕೇಂದ್ರ ಬಜೆಟ್​ 2022ರಲ್ಲಿ ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ಟೆಕ್ ಹಬ್ ಎಂದೇ ಖ್ಯಾತಿ ಪಡೆದ ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಲಾಗಿದೆ..

ಕೇಂದ್ರ ಬಜೆಟ್​ 2022
ಕೇಂದ್ರ ಬಜೆಟ್​ 2022

By

Published : Feb 1, 2022, 11:56 AM IST

Updated : Feb 1, 2022, 1:24 PM IST

ನವದೆಹಲಿ/ಬೆಂಗಳೂರು: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಟೆಕ್ ಹಬ್ ಎಂದೇ ಖ್ಯಾತಿ ಪಡೆದ ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ ನೀಡಿದ್ದಾರೆ.

ಕೇಂದ್ರ ಬಜೆಟ್​ 2022ರಲ್ಲಿ ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳೆಯರಿಗಾಗಿ ನಾರಿ ಶಕ್ತಿ ಯೋಜನೆ, ಸಕ್ಷಮ ಅಂಗನವಾಡಿ ಯೋಜನೆ, ಅಂಗನವಾಡಿಗಳ ಮೂಲಸೌಕರ್ಯವೂ ಸೇರಿದಂತೆ ಮಕ್ಕಳ ಅಭಿವೃದ್ಧಿಗೆ ಸಕಲ ರೀತಿಯ ನೆರವು ನೀಡಿ ಅನುದಾನ ಘೋಷಿಸಿದ್ದಾರೆ.

ಅಷ್ಟೇ ಅಲ್ಲ, ಕೊರೊನಾ ವೈರಸ್​ ಕಾಲದಲ್ಲಿ ಹದಗೆಟ್ಟಿರುವ ಮಾನಸಿಕ ಆರೋಗ್ಯಕ್ಕೆ ಕೂಡ ಹೆಚ್ಚಿನ ಒತ್ತು ನೀಡಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್​ ನೇತೃತ್ವದಲ್ಲಿ ರಾಷ್ಟ್ರೀಯ ಮೆಂಟಲ್ ಟೆಲಿ ಹಬ್ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ.

ಒಟ್ಟು 23 ಟೆಲಿ ಮಾನಸಿಕ ಆರೋಗ್ಯ ಕೇಂದ್ರಗಳು ಜನರಿಗೆ ಟೆಲಿ ಸಂವಹನದ ಮೂಲಕ ಮಾನಸಿಕ ಚಿಕಿತ್ಸೆ ನೀಡಲಿದೆ. ಇದಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ತಾಂತ್ರಿಕ ಸಂಸ್ಥೆ ತಂತ್ರಜ್ಞಾನ ನೆರವು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಐಐಐಟಿಗೆ ಬೆಂಬಲ: ಐಐಐಟಿ ಬೆಂಗಳೂರು ತಂತ್ರಜ್ಞಾನಕ್ಕೆ ಬೆಂಬಲ ನೀಡುವುದಾಗಿ ಸೀತಾರಾಮನ್​ ತಿಳಿಸಿದ್ದಾರೆ. ರಾಯಚೂರಿನಲ್ಲಿ 'ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)' ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರವು 2018 ಜನವರಿಯಲ್ಲಿ ಅನುಮೋದನೆ ನೀಡಿದ್ದು, ನಾಲ್ಕು ವರ್ಷಗಳಾದರೂ ಯಾವುದೇ ಅನುದಾನ ನೀಡಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಬೆಂಬಲ ನೀಡಿದ್ದು, ಅನುದಾನ ಘೋಷಿಸಲಾಗಿದೆ.

Last Updated : Feb 1, 2022, 1:24 PM IST

ABOUT THE AUTHOR

...view details