ಕರ್ನಾಟಕ

karnataka

ETV Bharat / state

ನಾಡಿನ ಆರ್ಥಿಕ ಸಮತೋಲನ ಕಾಪಾಡಲು ಕೇಂದ್ರದ ಪ್ಯಾಕೇಜ್ ನೆರವಾಗಲಿದೆ : ನಳಿನ್ ಕುಮಾರ್ ಕಟೀಲ್​ - ನಾಡಿನ ಆರ್ಥಿಕ ಸಮತೋಲನ ಕಾಪಾಡಲು ಕೇಂದ್ರದ ಪ್ಯಾಕೇಜ್ ನೆರವಾಗಲಿದೆ

ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನೊಳಗೊಂಡ ‘ಆತ್ಮ ನಿರ್ಭರ ಭಾರತ’ದ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಂಡಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ನಿರ್ಮಿಸುವ ಉದ್ದೇಶ ಸಫಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು.

Nalin Kumar
ನಾಡಿನ ಆರ್ಥಿಕ ಸಮತೋಲನ ಕಾಪಾಡಲು ಕೇಂದ್ರದ ಪ್ಯಾಕೇಜ್ ನೆರವಾಗಲಿದೆ; ನಳಿನ್ ಕುಮಾರ್ ಕಟೀಲು...!

By

Published : May 17, 2020, 9:27 PM IST

ಬೆಂಗಳೂರು: 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ನ್ನು ಒಟ್ಟು 5 ಹಂತದಲ್ಲಿ ವಿಂಗಡಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ 5 ದಿನದಿಂದ ಮಂಡಿಸಿದ್ದಾರೆ. ದೇಶದ ಸರ್ವರನ್ನು ಒಳಗೊಂಡ ಸಮರ್ಥ ಭಾರತದ ನಿರ್ಮಾಣ ಸಂಕಲ್ಪ ಈ ಆರ್ಥಿಕ ಪ್ಯಾಕೇಜ್​ನಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನೊಳಗೊಂಡ ‘ಆತ್ಮ ನಿರ್ಭರ ಭಾರತ’ದ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಂಡಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ನಿರ್ಮಿಸುವ ಉದ್ದೇಶ ಸಫಲವಾಗಲಿದೆ. ಅದಕ್ಕೆ ಪೂರಕವಾಗಿ ಸ್ವಾವಲಂಬಿ ಭಾರತ ಅಭಿಯಾನದ ಮೂಲಕ ದೇಶದ ಆರ್ಥಿಕತೆಗೆ ಒತ್ತು ನೀಡಿ, ಬಡ ಮತ್ತು ಮಧ್ಯಮ ವರ್ಗದ ಜನರು, ರೈತರು, ಕಾರ್ಮಿಕರು, ಜನಸಾಮಾನ್ಯರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರ ಮಾಡುವವರು, ಸ್ವಯಂ ಉದ್ಯೋಗಿಗಳು, ಸಣ್ಣ, ಅತಿ ಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳನ್ನು ಒಳಗೊಂಡಂತೆ ಉತ್ಪಾದಕ ಸೇವಾ ವಲಯ - ಮೊದಲಾದ ಸಮಾಜದ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಕೃಷಿ, ಮೀನುಗಾರಿಕೆ, ದವಸ ಧಾನ್ಯಗಳ ಮಾರುಕಟ್ಟೆಗೆ ಉತ್ತೇಜನ, ಗುಡಿ ಕೈಗಾರಿಕೆಗಳ ಬೆಳವಣಿಗೆ ಸೇರಿದಂತೆ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಆರ್ಥಿಕ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸ್ವದೇಶಿ ಕೈಗಾರಿಕೆ ಉತ್ತೇಜನಕ್ಕೆ ಪ್ರಸ್ತುತ ಇರುವ ಕಾನೂನುಗಳಿಗೆ ತಿದ್ದುಪಡಿ ತರುವುದು, ಆದಾಯ ತೆರಿಗೆ ಮರು ಪಾವತಿಯಲ್ಲಿ ಬದಲಾವಣೆ, ಉದ್ದಿಮೆಯಲ್ಲಿ ಹೂಡಿಕೆ ಮಿತಿಯಲ್ಲಿ ಹೆಚ್ಚಳ, ಭಾರತೀಯ ಗುತ್ತಿಗೆದಾರರು ಸರಬರಾಜುದಾರರ ಉತ್ತೇಜನಕ್ಕೆ ಸಮರ್ಪಕ ನೀತಿ ರಚಿಸಲಾಗಿದೆ. ಗುಡಿ ಕೈಗಾರಿಕೆ, ಸ್ಥಳೀಯ ಉತ್ಪನ್ನ ಪ್ಯಾಕೇಜಿಂಗ್​ ಉತ್ತೇಜನಕ್ಕೆ 10 ಸಾವಿರ ಕೋಟಿ ರೂಪಾಯಿ ಘೋಷಿಸಲಾಗಿದೆ. ಕೃಷಿ ವ್ಯವಸ್ಥೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 1 ಲಕ್ಷ ಕೋಟಿ ರೂಪಾಯಿ ಘೋಷಿಸಲಾಗಿದೆ. ಇದರಲ್ಲಿ ಗೋದಾಮು, ಸಂಸ್ಕರಣಾ ಘಟಕ, ಸಾಗಣೆ ವ್ಯವಸ್ಥೆ, ಶೀತಲ ಸ್ಟೋರೇಜ್ ಘಟಕ ಮೊದಲಾದವು ಒಳಗೊಂಡಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಮತ್ತು ಮಾರುಕಟ್ಟೆ ನಿಗದಿಪಡಿಸಿದ ಹೊಸ ಮಾರ್ಗ ದೊರೆಯಲಿದೆ ಎಂದು ತಿಳಿಸಿದರು.

ಪಶು ಸಂಗೋಪನೆ ಮತ್ತು ಡೈರಿ ತಂತ್ರಜ್ಞಾನ ಮೇಲ್ದರ್ಜೆಗೆ ಏರಿಸಲು 25 ಸಾವಿರ ಕೋಟಿ ರೂಪಾಯಿ ಘೋಷಿಸಲಾಗಿತ್ತು. ಸುಮಾರು 2 ಕೋಟಿಗೂ ಅಧಿಕ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳವೆ. ಪ್ರಧಾನ ಮಂತ್ರಿ ಮಹಾತ್ಮ ಸಂಪದ ಯೋಜನೆಯಡಿ 20 ಸಾವಿರ ಕೋಟಿ ರೂಪಾಯಿ ಘೋಷಿಸಲಾಗಿದ್ದು, 70 ಲಕ್ಷ ಟನ್ ಮೀನು ಹೆಚ್ಚುವರಿ ಲಭ್ಯವಾಗಲಿದೆ. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ದೇಶದ ಬಡ ಮತ್ತು ಪ್ರವಾಸ ಕೂಲಿ ಕಾರ್ಮಿಕರ ಜೀವನ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅವರು ದೇಶದ ಯಾವುದೇ ಭಾಗದಿಂದ ತಮ್ಮ ಪಾಲಿನ ಪಡಿತರ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಇದರಿಂದ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬಹುದಾಗಿದೆ ಎಂದು ಪ್ರತಿಪಾದಿಸಿದರು.

ಲಾಕ್​ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ 3,950 ಕೋಟಿ ರೂಪಾಯಿ ಹಂಚಿಕೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ತಲಾ 2,000 ರೂಪಾಯಿಯಂತೆ ಒಟ್ಟು 8.19 ಕೋಟೆ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆತಿದೆ. 20 ಕೋಟಿ ಜನ್​ಧನ್​ ಖಾತೆಗಳಿಗೆ 10,025 ಕೋಟಿ ರೂಪಾಯಿ ಮತ್ತು ಉಜ್ವಲ ಯೋಜನೆಯಡಿ 6.81 ಕೋಟಿ ವೆಚ್ಚದಲ್ಲಿ ಉಚಿತ ಸಿಲಿಂಡರ್ ಹಂಚಿಕೆ, ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ ಖರ್ಚು ಸೇರಿದಂತೆ ದೇಶದ ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ಕೆಲಸ ನಿರ್ವಹಿಸಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಘೋಷಣೆ ಮಾಡಿದ 20,97,053 ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ ನಾಡಿನ ಅರ್ಥಿಕ ಸಮತೋಲನ ಕಾಪಾಡಲು ನೆರವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

ABOUT THE AUTHOR

...view details