ಕರ್ನಾಟಕ

karnataka

ETV Bharat / state

ಸೋಂಕಿತರ ಅಂತ್ಯಕ್ರಿಯೆ ಬಳಿಕ ಬೇಕಾಬಿಟ್ಟಿ ಓಡಾಡ್ತಿದ್ದಾರೆ ಸ್ಮಶಾನ ಸಿಬ್ಬಂದಿ! - ಬೆಂಗಳೂರು

ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಸ್ಮಶಾನ ಸಿಬ್ಬಂದಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆಂದು ಜೆ.ಸಿ ನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Cemetery staff
ಸ್ಮಶಾನ ಸಿಬ್ಬಂದಿ

By

Published : Jul 1, 2020, 12:53 PM IST

Updated : Jul 1, 2020, 1:01 PM IST

ಬೆಂಗಳೂರು: ಕೊರೊನಾ ಸೋಂಕಿತರ ಅಂತ್ಯಕ್ರಿಯೆಯ ಬಳಿಕ ಸ್ಮಶಾನದ ಸಿಬ್ಬಂದಿ ನಡೆದುಕೊಳ್ಳುವ ರೀತಿ ನೋಡಿ ಜೆ.ಸಿ. ನಗರದ ವಾರ್ಡ್ ನಂಬರ್ 62 ಬಳಿ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಬೇಕಾಬಿಟ್ಟಿ ಓಡಾಡುತ್ತಿರುವ ಸ್ಮಶಾನ ಸಿಬ್ಬಂದಿ, ಸ್ಥಳೀಯರಿಂದ ಆಕ್ರೋಶ

ಸ್ಮಶಾನದಲ್ಲಿ ಸೋಂಕಿತರ ಮೃತದೇಹವನ್ನ ಮಣ್ಣು‌ ಮಾಡುತ್ತಿದ್ದಾರೆ. ಹೀಗಾಗಿ‌ ಅಲ್ಲಿನ ಅಕ್ಕಪಕ್ಕದವರು ಆಕ್ರೋಶ ವ್ಯಕ್ತಪಡಿಸಿ ನಿನ್ನೆಯಿಂದ ಕೊರೊನಾ ಸೋಂಕಿತರ ಮೃತದೇಹಗಳು ಸ್ಮಶಾನಕ್ಕೆ ತರಲಾಗುತ್ತಿದೆ. ಸದ್ಯ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ, ಪಿಪಿಇ ಕಿಟ್​ ಹಾಗೆ ಬಿಸಾಕ್ತಾರೆ. ಅವು ಗಾಳಿಯಲ್ಲಿ ಹಾರಿಕೊಂಡು ಬರ್ತಿವೆ. ಮಕ್ಕಳು, ವಯಸ್ಸಾದ ಹಿರಿಯರು ಇಲ್ಲಿದ್ದಾರೆ. ಹಾಗೆ ಸ್ಮಶಾನದಲ್ಲಿ ಕೆಲಸ ಮಾಡುವವರು ಯಾವುದೇ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್, ಕಿಟ್ ಧರಿಸದೇ ಎಲ್ಲೆಡೆ ಓಡಾಡ್ತಾರೆ. ಕೇಳಿದರೆ ದೇವರಿದ್ದಾರೆ‌ ಅಂತಾರೆ ಎಂದು ಜನ ಕಿಡಿಕಾರಿದ್ದಾರೆ.‌

ಸದ್ಯ ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜನತೆ ಮನವಿ ಮಾಡಿದ್ದಾರೆ.

Last Updated : Jul 1, 2020, 1:01 PM IST

ABOUT THE AUTHOR

...view details