ಬೆಂಗಳೂರು: ರೈಲಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಫೋನ್ನಲ್ಲಿ ಮಾತನಾಡುತ್ತಿರುವಾಗಲೇ ಕಳ್ಳನೊಬ್ಬ ಫೋನ್ ಕದ್ದು ಪರಾರಿಯಾಗಿರುವ ಘಟನೆ ನಗರದ ಹೆಬ್ಬಾಳ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ರೈಲಿನ ಡೋರ್ನಲ್ಲಿ ನಿಂತು ಫೋನ್ನಲ್ಲಿ ಮಾತನಾಡುವಾಗ ಇರಲಿ ಎಚ್ಚರ... ಯಾಕಂದ್ರೆ!? - bengalore latest news
ರೈಲಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಡೋರ್ ಬಳಿ ಹೋಗಿ ಮಾತನಾಡುವಾಗ ರೈಲಿನ ಪಕ್ಕ ಬಂದ ವ್ಯಕ್ತಿ ಕೂಡಲೇ ಫೋನ್ ಕಿತ್ತುಕೊಂಡು ಕಲ್ಲಿನಿಂದ ಹೊಡೆದು ಪರಾರಿಯಾದ ಘಟನೆ ಹೆಬ್ಬಾಳ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಯಶವಂತಪುರದಿಂದ ಕಣ್ಣೂರು ರೈಲಿನಲ್ಲಿ ಸಂಜೀಬ್ ಘೋಷ್ ಎಂಬುವವರು ಪ್ರಯಾಣ ಮಾಡುತ್ತಿದ್ದರು. ರೈಲು ಹೆಬ್ಬಾಳ ತಲುಪುತ್ತಿದ್ದಂತೆ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಸ್ನೇಹಿತನ ಕರೆ ಬಂತು ಎಂದು ಸಂಜೀಬ್ ಡೋರ್ ಬಳಿ ಹೋಗಿ ಮಾತನಾಡುವಾಗ ರೈಲಿನ ಪಕ್ಕ ಬಂದ ವ್ಯಕ್ತಿ ಫೋನ್ ಕಿತ್ತುಕೊಂಡಿದ್ದಾನೆ. ಕೂಡಲೇ ಸಂಜೀಬ್ ಕಿರುಚಿಕೊಂಡಾಗ ಮತ್ತೋರ್ವ ಕಲ್ಲಿನಿಂದ ಹೊಡೆದಿದ್ದಾನೆ.
ಈ ಹಿನ್ನೆಲೆ ಸಂಜೀಬ್ ಬಲಗಣ್ಣಿಗೆ ತೀವ್ರ ಗಾಯವಾಗಿದ್ದು, ರೈಲಿನಲ್ಲಿದ್ದ ಇನ್ನಿತರ ಪ್ರಯಾಣಿಕರು, ಆರ್ಪಿಎಫ್ ಸಿಬ್ಬಂದಿ ಸಂಜೀಬ್ಗೆ ಕೂಡಲೇ ರೈಲಿನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಆದರೆ ಈ ಹಿಂದೆ ಇದೇ ತರಹದ ಪ್ರಕರಣಗಳು ನಡೆದಿದ್ದರೂ ಸಹ ಇದುವರೆಗೂ ಯಾವೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿಲ್ಲ ಎಂಬ ಮಾತುಗಳು ಕೇಳಿ ಬರ್ತಿವೆ.