ಕರ್ನಾಟಕ

karnataka

ETV Bharat / state

ಮೊಬೈಲ್‌ ಕಳ್ಳರ ಕರಾಮತ್ತಿಗೆ ಕೇಂದ್ರದ CEIR ಕಡಿವಾಣ: ಹೇಗೆ ಗೊತ್ತೇ? ನೀವು ತಿಳಿದಿರಬೇಕಾದ ಸಂಗತಿ - ಮೊಬೈಲ್‌ಗಳನ್ನು ಪತ್ತೆ ಮಾಡುವ ವಿಧಾನ

ಕೇಂದ್ರ ಗೃಹ ಇಲಾಖೆ ಹಾಗೂ ದೂರ ಸಂಪರ್ಕ ಇಲಾಖೆಗಳ ಸಹಭಾಗಿತ್ವದಲ್ಲಿ ಸೆಂಟ್ರಲ್ ಎಕ್ವಿಟ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರರ್ (ಸಿಇಐಆರ್) ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಮೊಬೈಲ್​ಗಳ ಕಳ್ಳತನಕ್ಕೆ ಸಾಕಷ್ಟು ಕಡಿವಾಣ ಹಾಕಲಾಗುತ್ತಿದೆ.

CEIR Implement
CEIR Implement

By

Published : Jun 29, 2023, 9:59 PM IST

Updated : Jun 30, 2023, 6:45 PM IST

ಬೆಂಗಳೂರು:ದೇಶದಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ಮೊಬೈಲ್ ಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಹಾಗೂ ಕದ್ದ ಮೊಬೈಲ್‌ಗಳ ದುರ್ಬಳಕೆ ತಪ್ಪಿಸಲು ಕೇಂದ್ರ ಗೃಹ ಇಲಾಖೆ ಹಾಗೂ ದೂರ ಸಂಪರ್ಕ ಇಲಾಖೆಗಳ ಸಹಭಾಗಿತ್ವದಲ್ಲಿ ಜಾರಿಗೆ ತಂದಿದ್ದ ಸೆಂಟ್ರಲ್ ಎಕ್ವಿಟ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರರ್ (ಸಿಇಐಆರ್) ಯೋಜನೆ ಫಲಪ್ರದವಾಗುತ್ತಿದೆ.

ಇಂದಿನ ಹೈಟೆಕ್ ಜಮಾನದಲ್ಲಿ ಸ್ಮಾರ್ಟ್‌ಪೋನ್ ಬಳಸುವುದು ಸಾಮಾನ್ಯ. ಇದನ್ನೇ ತಮ್ಮ ದುಷ್ಕೃತ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿರುವ ಖದೀಮರು ಮೊಬೈಲ್ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳುವಾದ ಮೊಬೈಲ್ ದೊರೆತರೂ ದುರ್ಬಳಕೆ ಮಾಡಿಕೊಳ್ಳುವವರ ಪ್ರಮಾಣ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿದ್ದ ಸಿಇಐಆರ್ ಅನುಷ್ಠಾನದಿಂದ ದೇಶದಲ್ಲಿ ಕಳುವಾಗಿದ್ದ 6 ಲಕ್ಷಕ್ಕಿಂತಲೂ ಹೆಚ್ಚು ಮೊಬೈಲ್​ಗಳನ್ನು ಬ್ಲಾಕ್ ಮಾಡಲಾಗಿದೆ‌.

ವಾರಸುದಾರರಿಗೆ ಮೊಬೈಲ್​ ಹಸ್ತಾಂತರ

ಈ ಪೈಕಿ 2,70,235 ಮೊಬೈಲ್‌ಗಳನ್ನು ಪತ್ತೆ (Traced​) ಹಚ್ಚಲಾಗಿದೆ. ಕರ್ನಾಟಕದಲ್ಲಿ 72,265 ಮೊಬೈಲ್ ಬ್ಲಾಕ್‌ ಮಾಡಲಾಗಿದೆ. 12,588 ಮೊಬೈಲ್​ಗಳನ್ನು ಪತ್ತೆ ಹಚ್ಚಲಾಗಿದೆ. 6,156 ಮೊಬೈಲ್​ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ದೆಹಲಿಯೊಂದರಲ್ಲೇ 3,51,537 ಲಕ್ಷ ಮೊಬೈಲ್ ಬ್ಲಾಕ್ ಮಾಡಲಾಗಿದೆ. 2,04,215 ಪತ್ತೆ ಮಾಡಲಾಗಿದ್ದು, 1,324 ಹಿಂತಿರುಗಿಸಲಾಗಿದೆ. ಮಹಾರಾಷ್ಟ್ರದಲ್ಲಿ 82,547 ಬ್ಲಾಕ್‌ ಮಾಡಲಾಗಿದ್ದು, 31,369 ಟ್ರೇಸ್ ಮಾಡಿದರೆ, 3,486 ಹಿಂತಿರುಗಿಸಲಾಗಿದೆ. ತೆಲಂಗಾಣದಲ್ಲಿ 39,035 ಮೊಬೈಲ್ ಕಳುವಾಗಿರುವ ದೂರು ದಾಖಲಾಗಿವೆ. ಅದರಲ್ಲಿ 5,321 ಮೊಬೈಲ್‌ಗಳನ್ನು ಟ್ರೇಸ್ ಮಾಡಲಾಗಿದ್ದು 2,794 ಮೊಬೈಲ್‌ಗಳನ್ನು ಮಾಲೀಕರಿಗೆ ಪೊಲೀಸರು ಹಿಂತಿರುಗಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದೆಷ್ಟು?:ದೆಹಲಿ, ಮುಂಬೈ ಬಳಿಕ ಬೆಂಗಳೂರು ನಗರ ಪೊಲೀಸರು ಸಿಇಐಆರ್ ಯೋಜನೆ ಜಾರಿಗೊಳಿಸಿದ್ದರು. ಮೇ ಅಂತ್ಯಕ್ಕೆ ಕೊನೆಗೊಂಡಂತೆ ನಗರದಲ್ಲಿ 22581 ಜನರು ಮೊಬೈಲ್ ಕಳುವಾಗಿದೆ ಎಂದು ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿದ್ದಾರೆ. ಈ ಪೈಕಿ 3882 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದ್ದು, 2252 ಮೊಬೈಲ್‌ಗಳನ್ನು ರಿಕವರಿ ಮಾಡಿಕೊಳ್ಳಲಾಗಿದೆ. 1524 ಮೊಬೈಲ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಸೈಬರ್, ಆರ್ಥಿಕ ಹಾಗೂ ನಾರ್ಕೊಟಿಕ್ (ಸಿಇಎನ್) ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಸಿಇಐಅರ್ ಯೋಜನೆ ನೋಡಲ್ ಅಧಿಕಾರಿಗಳಾಗಿದ್ದಾರೆ. ಇ-ಲಾಸ್ಟ್‌ನಲ್ಲಿ ದಾಖಲಾದ ಮೊಬೈಲ್ ಕಳವು ದತ್ತಾಂಶವನ್ನು ಸಿಇಐಆರ್‌ಗೆ ಅಪ್‌ಲೋಡ್ ಮಾಡಲಿದ್ದಾರೆ.

ಮೊಬೈಲ್ ಬ್ಲಾಕ್, ಪತ್ತೆ ಹಾಗೂ ಜಪ್ತಿ ಮಾಡಲಾದ ರಾಜ್ಯವಾರು ಅಂಕಿ-ಅಂಶ

ಕದ್ದ ಮೊಬೈಲ್ ಕೈಯಲ್ಲಿದ್ದರೂ ನೋ ಯೂಸ್:ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಇ-ಲಾಸ್ಟ್ ಆ್ಯಪ್ ಮುಖಾಂತರ ಅಥವಾ ಪೊಲೀಸರಿಗೆ ದೂರು ಸಲ್ಲಿಸಿದರೆ ಸಿಇಐಆರ್ ಪೋರ್ಟಲ್​​ಗೆ ಹೋಗಿ ಅನ್‌ಬ್ಲಾಕ್ ಮಾಡುತ್ತಾರೆ. ಇದಕ್ಕೂ ಮುನ್ನ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ. ಕಳುವಾದ ಡೂಪ್ಲಿಕೇಟ್ ನಂಬರ್ ಪಡೆದು ಅದೇ ನಂಬರ್ ನೀಡಿದರೆ ಅದಕ್ಕೆ ಓಟಿಪಿ ಬರಲಿದೆ. ಅದೇ ನಂಬರ್ ದಾಖಲಿಸಿದರೆ ಅನ್‌ಬ್ಲಾಕ್ ಮಾಡಬಹುದು.

ಇದನ್ನು ಪೊಲೀಸರಲ್ಲದೇ ಮೊಬೈಲ್ ಕಳೆದುಕೊಂಡ ಮಾಲೀಕರೂ ಸಹ ಮಾಡಬಹುದು. ಒಮ್ಮೆ ಅನ್ ಬ್ಲಾಕ್ ಆದರೆ ಯಾರ ಕೈಗೆ ಮೊಬೈಲ್ ಸಿಕ್ಕರೂ ಉಪಯೋಗಕ್ಕೆ ಬರುವುದಿಲ್ಲ. ಸಿಮ್ ಬಿಸಾಡಿ ಹೊಸ ಸಿಮ್ ಖರೀದಿಸಿದರೂ ಪೊಲೀಸರಿಗೆ ಸಂದೇಶ ಬರಲಿದೆ. ಒಮ್ಮೆ ಕದ್ದ ಮೊಬೈಲ್ ನೋ ಯೂಸ್ ಎಂದು ಮನವರಿಕೆಯಾದರೆ ಖದೀಮರು ಕಳ್ಳತನಕ್ಕಿಳಿಯುವುದು ಕ್ರಮೇಣ ಕಡಿಮೆಯಾಗಲಿದೆ ಎನ್ನುತ್ತಾರೆ ಪೊಲೀಸರು.

ಅನ್‌ಬ್ಲಾಕ್ ಮಾಡಲು ಅವಕಾಶ:ಕಳುವಾಗಿದ್ದ ಮೊಬೈಲ್ ಪತ್ತೆಯಾದರೆ ಬ್ಲಾಕ್ ಆಗಿದ್ದ ಮೊಬೈಲ್ ಅನ್‌ಬ್ಲಾಕ್ ಮಾಡಲು ಅವಕಾಶವಿದೆ. www.ceir.gov.in ಪೋರ್ಟಲ್​​ಗೆ ಹೋಗಿ ಅನ್‌ಬ್ಲಾಕ್ ಮಾಡಬಹುದು. ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿದರೆ ನೋಡಲ್ ಅಧಿಕಾರಿಗಳು ಮೊಬೈಲ್ ಮತ್ತೆ ಬಳಕೆಗೆ ಯೋಗ್ಯವಾಗುವಂತೆ ಮಾಡಿಕೊಡಲಿದ್ದಾರೆ.

ವಾರಸುದಾರರಿಗೆ ಮೊಬೈಲ್​ ಹಸ್ತಾಂತರ

CEIR ನೆರವು ಪಡೆಯುವುದು ಸುಲಭ:ಮೊಬೈಲ್ ಕಳೆದು ಹೋದರೆ ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕಿಲ್ಲ. ಇದರ ಬದಲು ಬೇರೆ ಮೊಬೈಲ್‌ನಲ್ಲಿ CEIR ಆ್ಯಪ್‌ನಲ್ಲಿ ಮೊಬೈಲ್ ಕಳುವಾದ ಬಗ್ಗೆ ದೂರು‌ ದಾಖಲಿಸಿ, ಅಲ್ಲಿ ತಿಳಿಸಿದಂತೆ ನಿಮ್ಮ‌ ಮಾಹಿತಿ ದಾಖಲಿಸಿದ್ರೆ ಸಾಕು. ಇದರಿಂದ ನಿಮ್ಮ‌ ಮೊಬೈಲ್ ಇರುವ ಜಾಗ ಲಭ್ಯವಾಗುತ್ತದೆ. ಈ ಆ್ಯಪ್ ಮೂಲಕವೇ ಸಿಇಎನ್ ಪೊಲೀಸರು ಮೊಬೈಲ್ ಹುಡುಕಿ ವಾರಸುದಾರರಿಗೆ‌‌ ನೀಡುತ್ತಿದ್ದಾರೆ.

ಇದನ್ನೂಓದಿ:Annabhagya: ಬಿಪಿಎಲ್ ಕಾರ್ಡ್‌ದಾರರ ಆಧಾರ್ ಲಿಂಕ್ ಕಡ್ಡಾಯ: ಅನ್ನಭಾಗ್ಯದ ಹಣ ಪಡೆಯುವುದು ಹೇಗೆ ಗೊತ್ತೇ? ಇಲ್ಲಿದೆ ಮಾಹಿತಿ..

Last Updated : Jun 30, 2023, 6:45 PM IST

ABOUT THE AUTHOR

...view details