ಕರ್ನಾಟಕ

karnataka

ETV Bharat / state

ಎಸ್ಐಟಿ ತನಿಖಾಧಿಕಾರಿ ಮುಂದೆ ಹಾಜರಾಗ್ತಾರ ಸಿಡಿ ಯುವತಿ? - ಬೆಂಗಳೂರು

ಏ.11ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದ ಯುವತಿ ತಮ್ಮ ಬಳಿಯ‌ ಇರುವಂತಹ ಸಾಕ್ಷ್ಯಾಧಾರ ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ಪಡೆದಿದ್ದರು.‌ ಇದರಂತೆ ಇಂದು ಹಾಜರಾಗಿ ತಾಂತ್ರಿಕ ಸಾಕ್ಷ್ಯಾಧಾರ ಸಲ್ಲಿಸಬೇಕು ಎಂದು ತನಿಖಾಧಿಕಾರಿ ಕವಿತಾ ನೋಟಿಸ್ ಜಾರಿ ಮಾಡಿದ್ದರು.

cd woman  will attend sit enquiry
ಎಸ್ಐಟಿ ತನಿಖಾಧಿಕಾರಿ ಮುಂದೆ ಹಾಜರಾಗ್ತಾಳಾ ಸಿಡಿ ಯುವತಿ

By

Published : Apr 15, 2021, 11:38 AM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಇಂದು ಎಸ್​ಐಟಿ ಮುಂದೆ ವಿಚಾರಣೆಗೆ ಸಂತ್ರಸ್ತೆ ಹಾಜರಾಗುವ ಸಾಧ್ಯತೆಯಿದೆ.

ಏ.11ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದ ಯುವತಿ ತಮ್ಮ ಬಳಿಯ‌ ಇರುವಂತಹ ಸಾಕ್ಷ್ಯಾಧಾರ ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ಪಡೆದಿದ್ದರು.‌ ಇದರಂತೆ ಇಂದು ಹಾಜರಾಗಿ ತಾಂತ್ರಿಕ ಸಾಕ್ಷ್ಯಾಧಾರ ಸಲ್ಲಿಸಬೇಕು ಎಂದು ತನಿಖಾಧಿಕಾರಿ ಕವಿತಾ ನೋಟಿಸ್ ಜಾರಿ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಯುವತಿ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಯನ್ನು ತನಿಖಾಧಿಕಾರಿಗಳ ಮುಂದೆ ಬದಲಾಯಿಸಿದ್ದಾಳೆ ಎಂಬ ವದಂತಿ ಹಬ್ಬಿತ್ತು‌. ಹೀಗಾಗಿ ಮಾರನೇ ದಿನ ಯುವತಿ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಳು. ಒಂದು ವೇಳೆ ವಿಚಾರಣೆಗೆ ಬಂದರೆ ರಮೇಶ್ ಜಾರಕಿಹೊಳಿ ವಿರುದ್ದದ ಯಾವ ಸಾಕ್ಷ್ಯಗಳನ್ನು ಕೊಡಲಿದ್ದಾರೆ ಎಂಬುವುದು ಕುತೂಹಲ ಕೆರಳಿಸಿದೆ.

ಪೊಲೀಸ್ ಭದ್ರತೆ ಕೊಟ್ಟಿಲ್ಲ:

ಯುವತಿ ಪರ ವಕೀಲ ಜಗದೀಶ್ ಫೇಸ್‌ಬುಕ್ ಲೈವ್ ಮಾಡಿ ನಮಗೆ ಮತ್ತು ಯುವತಿಗೆ ಪೊಲೀಸರು ಭದ್ರತೆ ಕೊಟ್ಟಿಲ್ಲ. ನಗರ ಪೊಲೀಸ್ ಆಯುಕ್ತರಿಗೂ ಮನವಿ ಮಾಡಿದ್ದೇವೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಮಾರುತಿ ಅವರಿಗೂ ಮನವಿ ಮಾಡಿದ್ದೇವೆ. ಇದುವರೆಗೂ ನಮಗೆ ಭದ್ರತೆ ನೀಡಿಲ್ಲ. ನಮಗೆ ಏನಾದರೂ ಹೆಚ್ಚು ಕಡಿಮೆ ಏನು ಮಾಡಬೇಕು? ಎಲ್ಲಿದ್ದೀರಿ ಮಾರುತಿ ಅವರೇ ಲೆಟರ್ ಕೊಟ್ಟು ಎಲ್ಲಿ ಹೋದ್ರಿ. ಯಾಕೆ ಭದ್ರತೆ ಕೊಡೋದಕ್ಕೆ ಆಗಲ್ವಾ ನಿಮಗೆ? ಬೇರೆ ರಾಜ್ಯದಲ್ಲಿ ಅಡ್ವೊಕೇಟ್ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದರು. ನೀವು ಸರ್ಕಾರದ ಮಾತು ಕೇಳಿ ಭದ್ರತೆ ನೀಡುತ್ತಿಲ್ಲ. ನನ್ನ ಫೋನ್ ನೀವು ಟ್ಯಾಪ್ ಮಾಡ್ತಿದ್ದಿರಿ. ನನ್ನ ಫೋನ್ ಟ್ಯಾಪ್ ಮಾಡಿದ್ರೆ ನಿಮಗೇನು ಸಿಗುತ್ತೆ.? ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಎಸ್ಐಟಿ ಮುಂದೆ ಸಿಡಿ ಲೇಡಿ ತದ್ವಿರುದ್ಧ ಹೇಳಿಕೆ ನೀಡಿಲ್ಲ: ಯುವತಿ ಪರ ವಕೀಲರ ಸ್ಪಷ್ಟನೆ

ABOUT THE AUTHOR

...view details