ಬೆಂಗಳೂರು:ಸಿಡಿ ಪ್ರಕರಣ ಸಂಬಂಧ ಅಜ್ಞಾತ ಸ್ಥಳದಿಂದ ಮೂರನೇ ಬಾರಿ ಯುವತಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ಸಿಡಿ ಪ್ರಕರಣದ ಯುವತಿಯ ಮೂರನೇ ವಿಡಿಯೋ ಬಿಡುಗಡೆ.. ಆಕೆ ಹೇಳಿದ್ದೇನು? - Ramesh Jarkiholi CD case latest news
11:50 March 26
ಇಂದು ಮೂರನೇ ಬಾರಿ ಅಜ್ಞಾತ ಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾಳೆ.
29 ಸೆಕೆಂಡುಗಳ ವಿಡಿಯೋ ಇದಾಗಿದ್ದು, ಎಲ್ಲ ಕರ್ನಾಟಕ ಜನತೆ, ತಂದೆ - ತಾಯಿಯ ಆಶಿರ್ವಾದದಿಂದ ಮತ್ತು ಎಲ್ಲ ಪಕ್ಷದ ನಾಯಕರು, ಸಂಘಟನೆಯವರು ನನಗೆ ತುಂಬಾ ಬೆಂಬಲಿಸುತ್ತಿದ್ದಾರೆ. ನಾನು ಇಷ್ಟು ದಿನ ಅಂದರೆ 24 ದಿನ ಜೀವಭಯದಲ್ಲಿದ್ದೆ. ಜೀವ ಬೆದರಿಕೆಯಿಂದ ಭಯದಲ್ಲಿ ಬದುಕುತ್ತಿದ್ದೆ. ಈಗ ನನಗೆ ಎಲ್ಲೋ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರುವ ಕಾರಣಕ್ಕೆ ಮತ್ತು ನನಗೆ ಎಲ್ಲ ಬೆಂಬಲಿಸುತ್ತಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ನಾನು ಇವತ್ತು ನನ್ನ ವಕೀಲರಾದ ಜಗದೇಶ್ ಅವರ ಮುಖಾಂತರ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ ಎಂದು ಯುವತಿ ಹೇಳಿದ್ದಾಳೆ.
ಇದನ್ನೂ ಓದಿ:'ತಮಿಳುನಾಡಲ್ಲಿ ಕಮಲ ಅರಳಲಿದೆ' - ಅಣ್ಣಾಮಲೈ ಪರ ನಟಿ ನಮಿತಾ ಮತಬೇಟೆ
ಮಾ.13 ರಂದು ಮೊದಲ ಬಾರಿಗೆ ವಿಡಿಯೋ ರಿಲೀಸ್ ಮಾಡಿದ್ದ ಯುವತಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾಳೆ. ನಿನ್ನೆ ಎರಡನೇ ವಿಡಿಯೋದಲ್ಲಿ ಎಸ್ಐಟಿ ವಿರುದ್ಧ ಹರಿಹಾಯ್ದಿದ್ದಳು. ಇಂದು ಮೂರನೇ ಬಾರಿ ಅಜ್ಞಾತ ಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾಳೆ.