ಕರ್ನಾಟಕ

karnataka

ETV Bharat / state

ಕೊನೆಗೂ ಸಿಡಿ ಲೇಡಿ ಪೋಷಕರು ಪತ್ತೆ: ಯುವತಿಯ ತಂದೆ-ತಾಯಿ ಹೇಳಿಕೆ ದಾಖಲು?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿಯ ಕುಟುಂಬವನ್ನು ಸ್ಥಳೀಯ ಪೊಲೀಸರು ಕೊನೆಗೂ ಸಂಪರ್ಕ ಮಾಡಿದ್ದು, ಯುವತಿಯ ತಂದೆ-ತಾಯಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಯುವತಿಯ ಹುಟ್ಟಿನಿಂದ ಇಲ್ಲಿಯವರೆಗೆ ಎಲ್ಲ ವಿಷಯಗಳ ಬಗ್ಗೆ ತಂದೆ-ತಾಯಿಯಿಂದಲೇ ಮಾಹಿತಿ ಪಡೆದಿದ್ದಾರೆ ಎನ್ನಲಾಗ್ತಿದೆ.

ಕೊನೆಗೂ ಸಿಡಿ ಲೇಡಿ ಪೋಷಕರು ಪತ್ತೆ.!
ಕೊನೆಗೂ ಸಿಡಿ ಲೇಡಿ ಪೋಷಕರು ಪತ್ತೆ.!

By

Published : Mar 23, 2021, 12:37 PM IST

ಬೆಂಗಳೂರು:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತಂದೆ ಅಪಹರಣದ ದೂರು ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದ್ದ ಎಸ್​ಐಟಿ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ನಿನ್ನೆ ರಾಜಧಾನಿಗೆ ಮರಳಿತ್ತು.

ಇದೀಗ ಮೂಲಗಳಿಂದ ಮಾಹಿತಿ ದೊರೆತಿದ್ದು ಸಿಡಿ ಲೇಡಿಯ ಕುಟುಂಬವನ್ನು ಸ್ಥಳೀಯ ಪೊಲೀಸರು ಕೊನೆಗೂ ಸಂಪರ್ಕಿಸಿದ್ದು, ಯುವತಿಯ ತಂದೆ-ತಾಯಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಯುವತಿಯ ಹುಟ್ಟಿನಿಂದ ಇಲ್ಲಿಯವರೆಗೆ ಎಲ್ಲ ವಿಷಯಗಳ ಬಗ್ಗೆ ಆಕೆಯ ತಂದೆ-ತಾಯಿಯಿಂದಲೇ ಮಾಹಿತಿ ಪಡೆದಿದ್ದಾರೆ ಎನ್ನಲಾಗ್ತಿದೆ. ಎಲ್ಲಿ ವಿದ್ಯಾಭ್ಯಾಸ ಮಾಡಿದಳು? ಹೇಗೆ ಇದ್ದಳು? ಆಕೆಯ ಸ್ನೇಹಿತರು ಯಾರು? ಎನ್ನುವ ಪ್ರಶ್ನೆಗಳಿಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸಿಡಿ ಗ್ಯಾಂಗ್​ ಶಂಕಿತರು ಭೋಪಾಲ್​ನಲ್ಲಿರುವ ಸುಳಿವು: ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟಿರುವ ಎಸ್​ಐಟಿ ತಂಡ

ಕಿಡ್ನಾಪ್ ಬಗ್ಗೆ ಹೇಳಿಕೆ ದಾಖಲು: ಯುವತಿ ಇದುವರೆಗೆ ನಾಲ್ಕು ಬಾರಿ ಫೋನ್ ಮಾಡಿದ್ದಾಳೆ. ಗೋವಾ, ಬೆಂಗಳೂರು, ಚೆನ್ನೈಗೆ ಬಂದಾಗ ಸೇರಿ ಒಟ್ಟು ನಾಲ್ಕು ಬಾರಿ ಕರೆ ಮಾಡಿದ್ದಾಳೆ. ಮೊದಲ ಸಲ ಗೋವಾದಿಂದ ಕರೆ ಮಾಡಿದ್ದಳು. ಆಗ ತಾನು ಸೇಫ್ ಅಗಿದ್ದೇನೆ ಎಂದಿದ್ದಳು ಎಂದು ಪೋಷಕರು ಸ್ಥಳೀಯ ಪೊಲೀಸರಿಗೆ ತಿಳಿಸಿರುವ ಬಗ್ಗೆ ಮಾಹಿತಿ ದೊರೆತಿದೆ.

ಬಳಿಕ ಬೆಂಗಳೂರಿನಿಂದ ಒಮ್ಮೆ ಕರೆ ಮಾಡಿ ಮಾತನಾಡಿದ್ದಳು. ನಂತರ ಚೆನ್ನೈನಿಂದ ಕರೆ ಮಾಡಿದಾಗ ಭಯದಿಂದ ಮಾತನಾಡಿದ್ದಳು ಎಂದು ಪೋಷಕರು ತಿಳಿಸಿದ್ದಾರೆ ಎನ್ನಲಾಗ್ತಿದೆ.

ತನ್ನನ್ನು ಬಲವಂತವಾಗಿ ಇಟ್ಟುಕೊಂಡಿದ್ದಾರೆ. ತಾನು ಏನು ಆಗ್ತಿನೋ ಗೊತ್ತಿಲ್ಲ. ನಾನು ಈಗಾಗಲೇ ಡಿಪ್ರೆಶನ್​ನಲ್ಲಿದ್ದೇನೆ ಎಂದು ಹೇಳಿದ್ದಳು. ಮಗಳನ್ನು ಬಲವಂತವಾಗಿ ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ಸ್ಥಳೀಯ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಷ್ಟೂ ಬಾರಿ ಕರೆ ಮಾಡಿದ್ದು ಓರ್ವ ಸಹೋದರನ ಬಳಿ ಕಾಲ್ ರೆಕಾರ್ಡಿಂಗ್ ಇದೆ. ಆದರೆ ಆತ ಸ್ಥಳೀಯ ಪೊಲೀಸರಿಗೆ ಇನ್ನೂ ದೊರೆತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details