ಬೆಂಗಳೂರು:ಸಿಡಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಮೇಲೆ ನಂಬಿಕೆಯಿಲ್ಲ. ಈ ನಿಟ್ಟಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮುಖಾಂತರ ತನಿಖೆ ನಡೆಸಬೇಕೆಂದು ಸಿಡಿ ಯುವತಿ ಪತ್ರ ಬರೆದಿದ್ದಾಳೆ.
ಎಸ್ಐಟಿ ಮೇಲೆ ನನಗೆ ನಂಬಿಕೆ ಇಲ್ಲ, ನ್ಯಾಯಾಂಗ ತನಿಖೆಯೇ ಆಗಬೇಕು: ಹೈಕೋರ್ಟ್ ಸಿಜೆಗೆ ಯುವತಿ ಪತ್ರ - woman writing a letter to a High Court judge
ಸಿಡಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಮೇಲೆ ತಮಗೆ ನಂಬಿಕೆಯಿಲ್ಲ. ಈ ನಿಟ್ಟಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮುಖಾಂತರವೇ ತನಿಖೆ ನಡೆಸಬೇಕು ಎಂದು ಸಿಡಿ ಯುವತಿ ಕರ್ನಾಟಕ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾಳೆ.

ಹೈಕೋರ್ಟ್ ನ್ಯಾಯಾಧೀಶರಿಗೆ ಯುವತಿ ಪತ್ರ
ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಕೇಸ್ ನಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು ಎಂದು ಈ - ಮೇಲ್ ಮೂಲಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಸಿಡಿ ಯುವತಿ ನಿನ್ನೆ ಪತ್ರ ಬರೆದಿದ್ದಾಳೆ.
ಓದಿ : ವಿಡಿಯೋ 'ಗೇಮ್': ತನಿಖೆಗೆ ಹಾಜರಾಗುವಂತೆ ಯುವತಿಗೆ 2ನೇ ನೋಟಿಸ್ ಜಾರಿ