ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ.. ಯುವತಿ ಜಡ್ಜ್ ಮುಂದೆ ಹಾಜರಾಗೋದು ಬಹುತೇಕ ಅನುಮಾನ - ಬೆಂಗಳೂರು

ಮೂಲಗಳ ಪ್ರಕಾರ ನ್ಯಾಯಾಲಯವು ಯುವತಿ ಹಾಜರುಪಡಿಸಲು ಅನುಮತಿ ನೀಡಿಲ್ಲ ಎನ್ನಲಾಗುತ್ತಿದೆ..‌

CD case
ಸಿಡಿ ಪ್ರಕರಣ

By

Published : Mar 29, 2021, 6:01 PM IST

Updated : Mar 29, 2021, 6:07 PM IST

ಬೆಂಗಳೂರು :ಸಿಡಿ‌ ಪ್ರಕರಣ ಸಂಬಂಧ ಯುವತಿ ಕೋರ್ಟ್ ಮುಂದೆ ಹಾಜರಾಗುವುದು ಬಹುತೇಕ ಅನುಮಾನವಾಗಿದೆ‌. ಇನ್ನೂ ಕೆಲವೇ ಕ್ಷಣಗಳ‌ ಮಾತ್ರ ಕೋರ್ಟ್ ಕಲಾಪ ಇರುವುದರಿಂದ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡುವುದು ಕಷ್ಟ.

ಮೂಲಗಳ ಪ್ರಕಾರ ನ್ಯಾಯಾಲಯವು ಯುವತಿ ಹಾಜರುಪಡಿಸಲು ಅನುಮತಿ ನೀಡಿಲ್ಲ ಎನ್ನಲಾಗುತ್ತಿದೆ.‌ ಸಿಡಿ ಯುವತಿ ಪರ ವಕೀಲ ಜಗದೀಶ್ ನೀಡಿರುವ ಅರ್ಜಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ (ಸಿಎಂಎಂ) ಮುಂದಿದೆ. ಒಂದು ವೇಳೆ ಅನುಮತಿ ನೀಡಿದ್ದರೂ ಕೋರ್ಟ್​ಗೆ ಸಮಯದ ಅಭಾವದಿಂದ ಹಾಜರಾಗಲು ಸಾಧ್ಯವಿಲ್ಲ.‌

ಹೀಗಾಗಿ, ಕೋರಮಂಗಲ್ಲಿರುವ ಎನ್​ಜಿವಿ ಬಡಾವಣೆಯ ಜಡ್ಜ್ ನಿವಾಸಕ್ಕೆ ಕರೆದೊಯ್ದು ಯುವತಿ ಹೇಳಿಕೆ ದಾಖಲಿಕೊಳ್ಳಲು ಅವಕಾಶವಿದೆ. ಇನ್ನೊಂದೆಡೆ ಸಿಡಿ ಯುವತಿ ಪರ ವಕೀಲ ಜಗದೀಶ್ ಪ್ರತಿಕ್ರಿಯಿಸಿದ್ದು, ಯುವತಿ ಹಾಜರುಪಡಿಸಲು ಕೋರ್ಟ್ ಅನುಮತಿ ನೀಡಿದೆ.

ಆದೇಶ ಪ್ರತಿ ಸಿಕ್ಕ ಬಳಿಕ ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯ ಅನುಮತಿ ನೀಡಿದೆಯಾ? ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದರು.

ಓದಿ: ಎಸ್‌ಐಟಿ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ ; ನಿರೀಕ್ಷಣಾ ಜಾಮೀನು ಅರ್ಜಿಗೆ ಚಿಂತನೆ?

Last Updated : Mar 29, 2021, 6:07 PM IST

ABOUT THE AUTHOR

...view details