ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ದೂರುದಾರ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ದಿನೇಶ್ ಕಲ್ಲಹಳ್ಳಿ
ಸಿಡಿ ಪ್ರಕರಣ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕಲ್ಲಹಳ್ಳಿ ವಿಚಾರಣೆ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸುವ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.
ಸಂತ್ರಸ್ತೆಯ ಸಂಪೂರ್ಣ ಮಾಹಿತಿ, ಯಾರಿಂದ ಸಿಡಿ ಪಡೆದಿರುವುದು, ಯಾವಾಗ ಸಿಡಿ ಪಡೆದಿದ್ದು ಸೇರಿದಂತೆ ಪ್ರಕರಣ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಇನ್ಸ್ಪೆಕ್ಟರ್ ಮಾರುತಿ ಪಡೆಯುತ್ತಿದ್ದಾರೆ. ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಹಾಜರಾಗಿರುವ ಹಿನ್ನೆಲೆ ಯುವತಿ ಅಥವಾ ಕುಟುಂಬಸ್ಥರ ಕುರಿತು ಮಾಹಿತಿ ಕೇಳಲಿರುವ ಪೊಲೀಸರು ಮಾಹಿತಿಯನ್ನ ಪಡೆದ ಬಳಿಕ ಐಪಿಸಿ 417 ವಂಚನೆ, 504, ನಿಂದನೆ, 506, ಕೊಲೆ ಬೆದರಿಕೆ, 354D ಲೈಂಗಿಕ ದೌರ್ಜನ್ಯದಡಿ ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ. ಇದನ್ನೂ ಓದಿ:ಸಿಡಿ ಪ್ರಕರಣದ ಹಿಂದೆ 5 ಕೋಟಿ ರೂ. ಡೀಲ್ ನಡೆದಿದೆ: ಎಚ್ಡಿಕೆ ಹೊಸ ಬಾಂಬ್
ಕಲ್ಲಹಳ್ಳಿ ವಿಚಾರಣೆ ಬಳಿಕ ಇಂದು ಎಫ್ಐಆರ್ ದಾಖಲಿಸುವ ನಿರ್ಧಾರಕ್ಕೆ ಪೊಲೀಸರು ಬರಲಿದ್ದಾರೆ. ಪ್ರಕರಣ ಕುರಿತಂತೆ ಕಾನೂನು ತೊಡಕುಗಳಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿರಲಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ಕಾನೂನು ತಜ್ಞರ ಸಲಹೆ ಮೇರೆಗೆ ಇಂದು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.