ಕರ್ನಾಟಕ

karnataka

ETV Bharat / state

ವಿಡಿಯೋ ಜೊತೆಜೊತೆಗೆ ಆಡಿಯೋ ಸರದಿ: ಯುವತಿಗಿದೆಯೇ ಪ್ರಭಾವಿ ನಾಯಕನ ಸಹಾಯ'ಹಸ್ತ'? - ರಮೇಶ್ ಜಾರಕಿಹೊಳಿ

ವಕೀಲರ ಮೂಲಕ ಸಿಡಿ ಯುವತಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೆ, ಆಕೆ ಕುಟುಂಬಸ್ಥರ ಜೊತೆ ಮಾತನಾಡಿದ್ದಾಳೆ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ. ಈ ಆಡಿಯೋದಲ್ಲಿ ರಾಜಕೀಯ ಪಕ್ಷದ ಪ್ರಭಾವಿ ನಾಯಕರೊಬ್ಬರ ಹೆಸರು ಪ್ರಸ್ತಾಪವಾಗಿದೆ.

cd-case-an-audio-
ಸಿಡಿ ಪ್ರಕರಣಕ್ಕೆ ಟ್ವಿಸ್ಟ್

By

Published : Mar 26, 2021, 7:58 PM IST

Updated : Mar 27, 2021, 6:56 AM IST

ಬೆಂಗಳೂರು:ಶಾಸಕ ರಮೇಶ್‌ ಜಾರಕಿಹೊಳಿ ಅಶ್ಲೀಲಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಮೂಲಕ ಸಂತ್ರಸ್ತ ಯುವತಿ ದೂರು ನೀಡಿರುವ ಬೆನ್ನಲ್ಲೇ ಯುವತಿ, ಆಕೆಯ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಸಂಚಲನ ಮೂಡಿಸಿದೆ.

ಮಾ.2ರಂದು ಸಿಡಿ ಬಹಿರಂಗವಾದ ದಿನದಂತೆ ಯುವತಿ‌ ಪೋಷಕರೊಂದಿಗೆ 6.59 ನಿಮಿಷಗಳ ಕಾಲ ಮಾತನಾಡಿದ್ದಾಳೆ ಎಂಬ ಈ ಆಡಿಯೋದಲ್ಲಿ ಪ್ರಭಾವಿ ನಾಯಕನ ಸಹಾಯ'ಹಸ್ತ'ದ ಬಗ್ಗೆ ಹೇಳುತ್ತಾಳೆ.

ಆಡಿಯೋದಲ್ಲಿರುವುದೇನು?

'ವಿಡಿಯೋದಲ್ಲಿರುವುದು ನಾನಲ್ಲ ಅದು ಗ್ರಾಫಿಕ್ಸ್'​

ಮಾಧ್ಯಮಗಳಲ್ಲಿ ಬರುತ್ತಿರುವ ವಿಡಿಯೋ ನನ್ನದಲ್ಲ. ಅದು ಕೇವಲ ಗ್ರಾಫಿಕ್ಸ್.‌‌ ನಾನು ಯಾಕೆ ಆ ತರಹ ಕೆಲಸ ಮಾಡಲಿ?. ನನ್ನ ಜೊತೆ ಪ್ರಭಾವಿ ನಾಯಕರ ಕಡೆಯವರು ಇದ್ದಾರೆ. ಜಾರಕಿಹೊಳಿ ಜೊತೆ‌ ಮಾತನಾಡುತ್ತಿರುವ ವಿಡಿಯೋ ಕರೆಯನ್ನು ಮಾಡ್ಯೂಲೇಷನ್ ಮಾಡಲಾಗಿದೆ‌‌. ನಮ್ಮ‌ ಮನೆಯವರು ಆಗಿರುವ ‌ನೀವೇ ನಂಬದಿದ್ದರೆ ಹೇಗೆ?, ನನ್ನ ಸ್ನೇಹಿತರು ನಂಬಿದ್ದಾರೆ. ದಯವಿಟ್ಟು ನಂಬಿ ಎಂದು ಆಡಿಯೋ ಕರೆಯಲ್ಲಿ ಯುವತಿ ಸಂಬಂಧಿಕರಿಗೆ ಹೇಳುತ್ತಾಳೆ.

'ಅಪ್ಪ-ಅಮ್ಮನನ್ನು ಹ್ಯಾಂಡಲ್‌ ಮಾಡು'

ನನ್ನ ಜೊತೆ (ವ್ಯಕ್ತಿ)‌ ಇದ್ದಾನೆ‌.‌ ಎಲ್ಲವೂ ಕ್ಲಿಯರ್ ಮಾಡಿಕೊಂಡು ಊರಿಗೆ ಬರುತ್ತೇನೆ. ವಿಡಿಯೋದಲ್ಲಿರುವುದು ಕೇವಲ‌ ಗ್ರಾಫಿಕ್ಸ್ ಅಷ್ಟೇ. ಅಪ್ಪ-ಅಮ್ಮನನ್ನು ಹ್ಯಾಂಡಲ್ ಮಾಡು ಎಂದು ಆಕೆ ಸಹೋದರನಿಗೆ ಹೇಳಿದ್ದಾಳೆ.

Last Updated : Mar 27, 2021, 6:56 AM IST

ABOUT THE AUTHOR

...view details