ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರೂವಾರಿಗಳು ಎಂದು ಹೇಳಲಾಗ್ತಿರುವ ನರೇಶ್ ಗೌಡ ಮತ್ತು ಶ್ರವಣ್ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಇಬ್ಬರ ಮೇಲೆ ಸದಾಶಿವನಗರ ಠಾಣೆಯಲ್ಲಿ ಷಡ್ಯಂತ್ರ, ಬ್ಲ್ಯಾಕ್ಮೇಲ್ ಕೇಸ್ ದಾಖಲಾಗಿತ್ತು. ಇದೀಗ ಕೋರ್ಟ್ ಆದೇಶದಂತೆ ವಿಚಾರಣೆಗೆ ಹಾಜರಾಗಿದ್ದಾರೆ. ಷಡ್ಯಂತ್ರ, ಬ್ಲ್ಯಾಕ್ಮೇಲ್ ಆರೋಪ ಪ್ರಕರಣದಲ್ಲಿ ಇಬ್ಬರು ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆದರೆ, ಆರೋಪಿಗಳು 5 ದಿನಗಳ ಒಳಗೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.
ಇದೀಗ ನ್ಯಾಯಾಲಯ ಆದೇಶ ನೀಡಿದ 5ನೇ ದಿನ, ಅಂದರೆ ಕೊನೆಯ ದಿನ ಆರೋಪಿಗಳು ವಿಚಾರಣೆ ಎದುರಿಸಲು ಆಡುಗೋಡಿ ಟೆಕ್ನಿಕಲ್ ಸೆಲ್ಗೆ ಆಗಮಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಆರೋಪಿಗಳು ಎಸ್ಐಟಿ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ವಕೀಲರೊಂದಿಗೆ ಹಾಜರಾಗಿದ್ದಾರೆ. ಎಸ್ಐಟಿ ಕೂಡ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದೆ.