ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕಾರ್ ಸ್ಟಾರ್ಟ್ ಮಾಡುವ ಮುನ್ನ ಗೇರ್ ಚೆಕ್ ಮಾಡದೆ ಹೋದ್ರೆ ಏನೆಲ್ಲಾ ಅವಘಡ ಸಂಭವಿಸುತ್ತೆ ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ. ಬೆಂಗಳೂರು ನ್ಯೂ ಬಿಇಎಲ್ ರಸ್ತೆಯ ಆರ್.ಕೆ ಗಾರ್ಡನ್ 4ನೇ ಕ್ರಾಸಿನ ಮನೆ #31ರ ಮುಂದೆ ಘಟನೆ ನಡೆದಿದೆ.
ಕಾರ್ ರಿವರ್ಸ್ ಗೇರ್ನಲ್ಲಿರೋದನ್ನು ಗಮನಿಸದ ನಂದಿನಿ ರಾವ್ ರಾಜೇಶ್ ಎಂಬುವರು ಅಜಾಗರೂಕತೆಯಿಂದ ತಮ್ಮ ಕಾರಿನ ಮುಂದಿನ ಡ್ರೈವರ್ ಡೋರ್ ತೆಗೆದು ಸ್ಟಾರ್ಟ್ ಮಾಡಿದ್ದಾರೆ. ಕಾರಿನ ಹೊರಗೆ ನಿಂತೇ ಕಾರನ್ನು ಸ್ಟಾಟ್ ಮಾಡಿದಾಗ ರಿವರ್ಸ್ ಗೇರ್ನಲ್ಲಿದ್ದ ಕಾರ್ ಹಿಂದೆ ಚಲಿಸಿದೆ. ಕಾರಿನ ಡೋರ್ ಮತ್ತು ಪಕ್ಕದ ಮರದ ನಡುವೆ ಸಿಕ್ಕಿ ಕ್ರಷ್ ಆಗಿದ್ದಾರೆ.