ಬೆಂಗಳೂರು: ಪರಂ ಆಪ್ತ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಸ್ಪಷ್ಟನೆ ನೀಡಿದ ಬೆನ್ನಲ್ಲೇ ದೊರೆತ ಸಿಸಿಟಿವಿ ವಿಡಿಯೋ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಅ.10ರಂದು ಮಧ್ಯಾಹ್ನ 1.17 ರ ಸುಮಾರಿಗೆ ಆರು ಮಂದಿ ರಮೇಶ್ ಮನೆಗೆ ಇನ್ನೋವಾ ಕಾರಿನಲ್ಲಿ ಆಗಮಿಸಿದ್ದಾರೆ. ಬಳಿಕ ಅವರು ರಮೇಶ್ ಮನೆ ಒಳ ಪ್ರವೇಶಿಸಿದ್ದಾರೆ. ಆದ್ರೆ ಇವರು ಐಟಿ ಅಧಿಕಾರಿಗಳ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.
ಮಾಜಿ ಡಿಸಿಎಂ ಜಿ. ಪರಮೇಶ್ವರ್ ಆಪ್ತ ಕಾರ್ಯದರ್ಶಿ ರಮೇಶ್ ಮನೆ ಮೇಲೆ ಐಟಿ ದಾಳಿ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿತ್ತು.