ಬೆಂಗಳೂರು:ಡಿ.ಜೆ ಹಳ್ಳಿ, ಕೆ.ಜೆ ಹಳ್ಖಿ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರನ್ನ ಜೈಲಿಗೆ ಕಳಿಸ್ತೀವಿ. ಸೈಬರ್ ಖದೀಮರನ್ನ ಮಟ್ಟ ಹಾಕ್ತೀವಿ ಅಂದಿದ್ದ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸದ್ಯ ಟೆಕ್ನಿಕಲ್ ಮೊರೆ ಹೋಗೋ ಪ್ಲ್ಯಾನ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾ ಮೇಲೆ ನಿಗಾ ವಹಿಸಲಾಗುವುದು: ಸೈಬರ್ ತಜ್ಞರು ಇನ್ಮುಂದೆ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಆಂಡ್ ಟೆಕ್ನಿಕಲ್ ಸೆಲ್ ಮೂಲಕ ನಿಗಾ ಇಟ್ಟು ವಿನಾ ಕಾರಣ ಪೋಸ್ಟ್ ಮಾಡುವ ಕಿಡಿಗೇಡಿಗಳ ಹೆಡೆಮುರಿ ಕಟ್ಟಲಿದ್ದಾರೆ ಸೈಬರ್ ಪೊಲೀಸರು. ಹಾಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕೂಡ ಎಲ್ಲಾ ಹಿರಿಯಾಧಿಕಾರಿಗಳು ಅಲರ್ಟ್ ಇರುವಂತೆ ಸೂಚಿಸಿದ್ದಾರೆ. ಹಾಗಿದ್ರೆ ಟೆಕ್ನಿಕಲ್ನಿಂದ ಸೈಬರ್ ಪ್ರಕರಣಕ್ಕೆ ಬ್ರೇಕ್ ಹಾಕಬಹುದು ಅಂತಾರೆ ಸೈಬರ್ ತಜ್ಞರು.
ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣ ಎಬ್ಬಿಸೋಕೆ ಕಾರಣವಾಗಿದ್ದು ಒಂದು ಅವಹೇಳನಕಾರಿ ಪೋಸ್ಟ್. ಇದು ಒಂದು ಕ್ಷಣದಲ್ಲಿ 5000 ಮಂದಿಗೆ ರೀಚ್ ಆಗಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ-ಸಿಕ್ಕ ಕಮೆಂಟ್, ಬೇಕಾಬಿಟ್ಟಿ ಅವಹೇಳನಕಾರಿ ಪೋಸ್ಟ್ಗಳದ್ದೇ ಹಾವಳಿ ಹೆಚ್ಚಾಗ್ತಿದೆ. ಇಂತಹ ಪ್ರಕರಣಗಳು ಕಂಡು ಬರ್ತಿರುವ ಹಿನ್ನೆಲೆ, ಸದ್ಯ ಸಾಮಾಜಿಕ ಜಾಲತಾಣದ ಕಳ್ಳರನ್ನ ಹಾಗೂ ಸೈಬರ್ ಖದೀಮರನ್ನ ಮಟ್ಟ ಹಾಕೋಕೆ ಕಮಿಷನರ್ ಕಮಲ್ ಪಂತ್ ಕೂಡ ಮುಂದಾಗಿದ್ದಾರೆ.
ಟೆಕ್ನಿಕಲ್ ಆಗಿ ಸ್ಟ್ರಾಂಗ್ ಮಾಡಲು ಕಮಲ್ ಪಂತ್ ಅಧಿಕಾರಿ ಜೊತೆ ಚರ್ಚೆ ನಡೆಸಿದ್ದಾರೆ. ನಮ್ಮ ಬೆಂಗಳೂರಿನಲ್ಲಿರುವ ಸೈಬರ್ ಟೆಕ್ನಿಕಲ್ ಟೀಂ ಇಡೀ ರಾಜ್ಯವನ್ನ ಮಾನಿಟರಿಂಗ್‌ಮಾಡಬಹುದಾಗಿದೆ. ಈಗಾಗಲೇ ಗೃಹ ಸಚಿವರು ತಜ್ಞರ ಜೊತೆ ಮಾತುಕತೆ ನಡೆಸಿದ್ದು, ಅದೇ ಎಕ್ಸ್ಪರ್ಟ್ಸ್ಗಳನ್ನ ಸೈಬರ್ ಸಿಬ್ಬಂದಿಗೆ ಟ್ರೈನಿಂಗ್ ನೀಡಿ ಸಲಹೆ ಸೂಚನೆಗಳನ್ನ ನೀಡುವಂತೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅವಹೇಳನ ಪೋಸ್ಟ್ ಅಥವಾ ಸೈಬರ್ ಹಾವಳಿ ತಪ್ಪಿಸೋಕೆ ಸಿಬ್ಬಂದಿ ಯಾವ ರೀತಿ ಟೆಕ್ನಿಕಲಿ ಸ್ಟ್ರಾಂಗ್ ಆಗಬೇಕು ಅನ್ನೋದ್ರ ಕುರಿತು ಎಕ್ಸ್ಪರ್ಟ್ಗಳ ಬಳಿ ಮಾಹಿತಿ ಪಡೆದುಕೊಳ್ತಿದ್ದಾರೆ ಸೈಬರ್ ಸಿಬ್ಬಂದಿ.
ಸೈಬರ್ನ ತಡೆಗಟ್ಟಲು ಏನೆಲ್ಲಾ ಪ್ಲ್ಯಾನ್ ಬೇಕು ಅನ್ನೋದ್ರ ಬಗ್ಗೆ ನೋಡೊದಾದ್ರೆ...
- ರಾಜ್ಯದಲ್ಲಿ ಸ್ಯಾಟಿಲೈಟ್ ಮಾನಿಟರಿಂಗ್ ಬಲವರ್ಧನೆಗೊಳ್ಳಬೇಕು
- ಸಿಬ್ಬಂದಿ ಇದರ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕು
- ಸೈಬರ್ ಕಮಿಟಿ ರಚನೆ ಮಾಡಬೇಕು
- ಸೈಬರ್ ಕಮಿಟಿಯಲ್ಲಿ ತಜ್ಞರಗಳಿರಬೇಕು
- ಸೈಬರ್ ಎಕ್ಸ್ಪರ್ಟ್ಗಳಿಂದ ಸಿಬ್ಬಂದಿ ಸಲಹೆ ಸೂಚನೆ ತೆಗೆದುಕೊಳ್ಳಬೇಕು
- ಸೈಬರ್ ಥರಾ ಮಿನಿಸ್ಟ್ರಿ ರಚನೆ ಮಾಡಲು ಸದ್ಯಕ್ಕೆ ಸಾಧ್ಯವಿಲ್ಲ
- ಹೀಗಾಗಿ ಕಮಿಟಿಗೆ ಆದ್ಯತೆ ನೀಡಿ ಸ್ಯಾಟಿಲೈಟ್ನಿಂದ ಸಂಪೂರ್ಣ ಮಾಹಿತಿ ತೆಗೆದುಕೊಳ್ಳಬೇಕು
- ಯಾವುದೇ ವ್ಯಕ್ತಿ ಸಮಾಜ ಘಾತುಕ ಅಥವಾ ಯಾವುದೇ ಪೋಸ್ಟ್ ಹಾಕಿದ್ರು ಅದರ ಮಾಹಿತಿ ಮಾನಿಟರಿಂಗ್ ಟೀಂಗೆ ಇರುತ್ತೆ
- ಇದರ ಬಗ್ಗೆ ಸಿಬ್ಬಂದಿಗೆ ಮಾಹಿತಿ ಇರಬೇಕು
- ತಿಂಗಳಿಗೆ ಎರಡು ಬಾರಿ ಸಿಬ್ಬಂದಿಗೆ ತಜ್ಞರು ಟ್ರೈನಿಂಗ್ ನೀಡಬೇಕು
ಈ ಎಲ್ಲಾ ಅಂಶವನ್ನ ಗಮನದಲ್ಲಿಟ್ಟುಕೊಂಡು ಸದ್ಯ ಸೈಬರ್ ಟೀಂನ ಮತ್ತಷ್ಟು ಬಲವರ್ಧನೆಗೊಳಿಸಲು ಮುಂದಾಗಿದ್ದಾರೆ. ಆದ್ರೆ ಎಷ್ಟೇ ಪ್ಲ್ಯಾನಿಂಗ್ ಏನೇ ಮುಂಜಾಗೃತ ಕ್ರಮ ತೆಗೆದುಕೊಂಡ್ರು ಸೈಬರ್ ಖದೀಮರನ್ನ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವವರನ್ನ ಮಟ್ಟ ಹಾಕೋಕೆ ಆಗ್ತಿಲ್ಲ. ಹೀಗಾಗಿ ಟೆಕ್ನಿಕಲ್ ಮೊರೆ ಹೋಗಿರುವ ಗೃಹ ಇಲಾಖೆ ಎಷ್ಟು ಸಫಲರಾಗ್ತಾರೆ ಕಾದು ನೋಡಬೇಕಾಗಿದೆ.