ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಆಪ್ತ ರವಿಶಂಕರ್ನನ್ನು ಮೆಡಿಕಲ್ ಚೆಕಪ್ಗೆ ಒಳಪಡಿಸಲಾಗಿದೆ.
ಸಿಸಿಬಿ ವಶದಲ್ಲಿರುವ ರಾಗಿಣಿ ಆಪ್ತ ರವಿಶಂಕರ್ಗೆ ವೈದ್ಯಕೀಯ ಪರೀಕ್ಷೆ - ಡ್ರಗ್ಸ್ ಮಾಫಿಯಾ ಪ್ರಕರಣ
ಸ್ಯಾಂಡಲ್ವುಡ್ನ ಡ್ರಗ್ ನಂಟಿನ ಸಂಬಂಧ ಸಿಸಿವಿ ಪೊಲೀಸರ ವಶದಲ್ಲಿರುವ ನಟಿ ರಾಗಿಣಿ ಆಪ್ತ ರವಿಶಂಕರ್ನನ್ನು ಸಿಸಿಬಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.
![ಸಿಸಿಬಿ ವಶದಲ್ಲಿರುವ ರಾಗಿಣಿ ಆಪ್ತ ರವಿಶಂಕರ್ಗೆ ವೈದ್ಯಕೀಯ ಪರೀಕ್ಷೆ The CCB called for a medical examination for Ravi Shankar](https://etvbharatimages.akamaized.net/etvbharat/prod-images/768-512-8667247-thumbnail-3x2-mn.jpg)
ರಾಗಿಣಿ ಆಪ್ತ ರವಿಶಂಕರ್ಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ದ ಸಿಸಿಬಿ
ಮೆಡಿಕಲ್ ಚೆಕಪ್ ವೇಳೆ ಕೊರೊನಾ ಟೆಸ್ಟ್ ಕೂಡ ಮಾಡಲಿದ್ದು, ತದನಂತರ ಇನ್ಸ್ಪೆಕ್ಟರ್ ಸಿರಾಜ್ ನೇತೃತ್ವದಲ್ಲಿ ಹೆಚ್ಚಿನ ವಿಚಾರಣೆ ನಡೆಯಲಿದೆ. ಸದ್ಯ ವೈದ್ಯಕಿಯ ಪರೀಕ್ಷೆ ಕೊನೆಗೊಂಡ ಬಳಿಕ ಮರಳಿ ಸಿಸಿಬಿ ಕಚೇರಿಗೆ ಕರೆತರಲಿದ್ದಾರೆ.
ರಾಗಿಣಿ ಆಪ್ತ ರವಿಶಂಕರ್ಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ದ ಸಿಸಿಬಿ
ಸ್ಯಾಂಡಲ್ವುಡ್ ಡ್ರಗ್ ಪ್ರಕರಣ ಸದ್ದು ಮಾಡುತ್ತಿದ್ದು, ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ನಟಿ ರಾಗಿಣಿ ಅವರಿಗೂ ನೋಟಿಸ್ ನೀಡಲಾಗಿದೆ.