ಕರ್ನಾಟಕ

karnataka

ETV Bharat / state

​ಯುವರಾಜ್​ ಹಣ ಸಂದಾಯ ಆರೋಪ: ಸಿಸಿಬಿಯಿಂದ ನಟಿ ರಾಧಿಕಾ ಸಹೋದರ ರವಿರಾಜ್​ ವಿಚಾರಣೆ - CCB

ಆರ್​ಎಸ್ಎಸ್ ಮುಖಂಡನ ಸೋಗಿನಲ್ಲಿ ಹಲವರಿಗೆ ಮೋಸ ಮಾಡಿದ್ದ ಯುವರಾಜ್ ಖಾತೆಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಸಹೋದರ ರವಿರಾಜ್​ಗೆ 75 ಲಕ್ಷ ರೂಪಾಯಿ ಹಣ ಸಂದಾಯ ಆರೋಪ ಸಂಬಂಧ ಸಿಸಿಬಿ ಪೊಲೀಸರು ರವಿರಾಜ್​ ವಿಚಾರಣೆ ನಡೆಸಿದ್ದಾರೆ.

sdd
ರವಿರಾಜ್​ಗೆ ಸಿಸಿಬಿ ಶಾಕ್

By

Published : Jan 10, 2021, 10:31 PM IST

ಬೆಂಗಳೂರು: ಸಿಸಿಬಿ ವಶದಲ್ಲಿರುವ ಯುವರಾಜ್ ಖಾತೆಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಸಹೋದರ ರವಿರಾಜ್​ಗೆ ಹಣ ಸಂದಾಯ ಆರೋಪ ಸಂಬಂಧ ಸಿಸಿಬಿ ಪೊಲೀಸರು ರವಿರಾಜ್ ವಿಚಾರಣೆ ನಡೆಸಿದ್ದಾರೆ.

ರಾಧಿಕಾ ಕುಮಾರಸ್ವಾಮಿಯ ಸಹೋದರ ರವಿರಾಜ್​ನನ್ನು ಸಿಸಿಬಿ ತನಿಖಾಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಯುವರಾಜ್ ಖಾತೆಯಿಂದ ರಾಧಿಕಾ ಖಾತೆಗೆ 75 ಲಕ್ಷ ಹಣ ಸಂದಾಯ ಹಾಗೂ ಈಗಾಗಲೇ ಪೊಲೀಸರ ಮುಂದೆ ರಾಧಿಕಾ ನೀಡಿರುವ ಹೇಳಿಕೆ‌ ಮೇರೆಗೆ ರವಿರಾಜ್​ಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.

ಹಣ ವರ್ಗಾವಣೆ ಕುರಿತು ಬ್ಯಾಂಕ್ ವ್ಯವಹಾರ ಸಂಬಂಧ ತನಿಖಾಧಿಕಾರಿಗಳು ಸಾಕ್ಷ್ಯಾಧಾರ ಕಲೆಹಾಕುತ್ತಿದ್ದಾರೆ‌. ಹಣ ಸಂದಾಯದ ಬಗ್ಗೆ ಜ. 8ರಂದು ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆ ಎದುರಿಸಿದ್ದರು.

ABOUT THE AUTHOR

...view details